ನ.1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಲು ಮನವಿ

0
25
ಬೆಂಗಳೂರು:
       ಸದ್ಯದ ಪರಿಸ್ಥತಿಯಲ್ಲಿ ನವೆಂಬರ್ 1 ಎಂದರೆ ನಮಗೆ ತಕ್ಷಣ ನೆನಪಿಗೆ ಬರುವುದು ಕನ್ನಡ ರಾಜ್ಯೋತ್ಸವ ಇನ್ನು ಮುಂದೆ ಅದಕ್ಕೆ ಇನ್ನೊಂದು ಜೋಡಣೆ ಆದರು ಆಶ್ಚರ್ಯ ಪಡಬೇಕಾಗಿಲ್ಲ ಅದೆ ಬಾಲ್ಯವಿವಾಹ ವಿರೋಧಿ ದಿನ, ಇದನ್ನು ಕಾರ್ಯ ರೂಪಕ್ಕೆ ತರಲು  ಮಕ್ಕಳ ಹಕ್ಕುಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ . 
   
       ಸಚಿವೆ ಜಯಮಾಲ ಅವರನ್ನು ಭೇಟಿ ಮಾಡಿದ ಅವರು ನ.1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂಬ ಮನವಿ ಸಲ್ಲಿಸುವುದಾಗಿ ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ ರಾವ್ ಹೇಳಿದ್ದಾರೆ.  ಇದೇ ವೇಳೆ ಯು ಎನ್ ಐ ಸಿಇಎಫ್ ನ ಅಂಕಿ ಅಂಶಗಳ ಪ್ರಕಾರ 2015-16  ಸಾಲಿನಲ್ಲಿ 18 ನೇ ವಯಸ್ಸಿಗಿಂತ ಮುನ್ನವೇ ವಿವಾಹವಾಗುತ್ತಿರುವವರ ಯುವತಿಯರ ಸಂಖ್ಯೆ ರಾಜ್ಯದಲ್ಲಿ ಶೇ.21.4 ರಷ್ಟಾಗಿದೆ ಎಂಬ ನಿಖರ ಅಂಕಿ ಅಂಶಗಳ ಸಮೇತ ಮನವಿ ಮಾಡಿದ್ದಾರೆ. 

ನ.1 ಏಕೆ?
        2006 ರ ನ.1 ರಂದು ಬಾಲ್ಯವಿವಾಹ ರದ್ದತಿ ಕಾಯ್ದೆ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ನ.1 ರಂದು ನವೆಂಬರ್ 1 ನ್ನು ಬಾಲ್ಯವಿವಾಹ ವಿರೋಧಿ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ನರಸಿಂಹ ಜಿ ರಾವ್ ಆಗ್ರಹಿಸಿದ್ದಾರೆ. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here