ಎಸಿಬಿ ಬಲೆಗೆ ಬಿದ್ದ ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್‌

ಬೆಂಗಳೂರು: 

      ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರಗಳನ್ನು ನೀಡಲು 5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು,  50 ಸಾವಿರ ಅಡ್ವಾನ್ಸ್ ಹಣ ಸ್ವೀಕರಿಸುತ್ತಿದ್ದ  ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು  ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

      ಅಲಿ ಅಸ್ಗರ್ ರಸ್ತೆಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ನೋಂದಣಿ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ವಸತಿ ಮತ್ತು ಇತರ ಸಂಘಗಳ ನೋಂದಣಿ ಕಚೇರಿಯ ಹೆಚ್ಚುವರಿ ನೋಂದಣಿ ಅಧಿಕಾರಿ ಶಶಿಧರ್‌ ಮತ್ತು ಪುಷ್ಪಲತಾ ಅವರನ್ನು ಬಂಧಿಸಿದ್ದಾರೆ.

ಪ್ರಕರಣ:

      ನೋಂದಾಯಿತ ಸಹಕಾರ ಸಂಘ ಷೇರು ಸಂಗ್ರಹಕ್ಕೆ ಅನುಮತಿ ನೀಡಲು ಅರ್ಜಿ ಸಲ್ಲಿಸಿತ್ತು. ಈ ಅನುಮತಿ ಪತ್ರ ನೀಡಲು ಅರ್ಜಿದಾರರಿಂದ ಅಧಿಕಾರಿಗಳು 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದರು. ಹಾಗೂಹೀಗೂ ಮಾಡಿ ಚೌಕಾಸಿ ನಡೆದು ಕೊನೆಗೆ 5 ಲಕ್ಷಕ್ಕೆ ವ್ಯವಹಾರ ಕುದುರಿತ್ತು ಎನ್ನಲಾಗಿದೆ. ಇಂದು ಅಡ್ವಾನ್ಸ್ ಹಣವೆಂಬಂತೆ 50 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

      ಎಸಿಬಿ ಐಜಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ನೇತೃತ್ವವನ್ನು ಎಸ್ಪಿ ಡಾ. ಸಂಜೀವ್‌ ಪಾಟೀಲ ವಹಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap