#MeToo ಸಂತ್ರಸ್ಥರ ಪರ ನಿಂತ ಪ್ರಕಾಶ್ ರಾಜ್

ಬೆಂಗಳೂರು: 
         ನೆನ್ನೆಯಿಂದ ಸುದ್ದಿ ಮಾಡಿದ್ದ  ಶ್ರುತಿ ಹರಿಹರನ್ #MeToo ಪ್ರಕರಣಕ್ಕೆ ಕರ್ನಾಟಕದ ಬಹುಬಾಶ ನಟ ಪ್ರಕಾಶ ರೈ ಬೆಂಬಲ ಸೂಚಿಸಿದ್ದಾರೆ. 
         ನಟ ಅರ್ಜುನ್ ಸರ್ಜಾ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಇದೀಗ ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಹಲವರು ಸೇರಿದಂತೆ ಜನಸಾಮಾನ್ಯರು ಶ್ರುತಿ ಹರಿಹರನ್ ಅವರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ .
         ಈ ಮಧ್ಯೆ ನಟ ಪ್ರಕಾಶ್ ರೈ ನಟಿ ಶ್ರುತಿ ಹರಿಹರನ್ ಪರವಾಗಿ ನಿಂತಿದ್ದಾರೆ. ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಅರ್ಜುನ್ ಸರ್ಜಾ ಕೂಡ ಕನ್ನಡದ ಹೆಮ್ಮೆ. ನಾನು ಶ್ರುತಿ ಹರಿಹರನ್ ಪರವಾಗಿ ಮತ್ತು ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಸುದ್ದಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap