ನಟಿ ರಮ್ಯಾ ನಂಬರ್ 420!!!

ಮಂಡ್ಯ:

      ರಾಜಕೀಯದಲ್ಲಿ ಟ್ವೀಟ್ ಮಾಡುವ ಮುಖಾಂತರ ಇತ್ತೀಚೆಗೆ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ರಮ್ಯಾ ಈಗ 420 ಎಂಬ ನಂಬರ್ ನಿಂದ ಸುದ್ಧಿಯಾಗಲು ಹೊರಟಿದ್ದಾರೆ.

      ರಮ್ಯಾ ಇದೀಗ 420 ಅಂತೆ.  ಅಂದರೆ ಮತದಾರರ ಪಟ್ಟಿಯಲ್ಲಿ ರಮ್ಯಾಗೆ 420ನೇ ಸಂಖ್ಯೆ ಸಿಕ್ಕಿದ್ದು, ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನ ಎಂದಿದೆ.

      ಕಳೆದ ವಿಧಾನಸಭಾ ಚುನಾವಣೆಯಲ್ಲೂ 420 ಸಂಖ್ಯೆ ಹೊಂದಿದ್ದ ರಮ್ಯಾ ಅವರ ಹೆಸರು ನಗರಸಭೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ 671ಕ್ಕೆ ಬದಲಾಗಿತ್ತು. ಇದೀಗ ಮಂಡ್ಯ ಲೋಕಸಭಾ ಉಪ ಚುನಾವಣೆಯ ಮತದಾರರ ಪಟ್ಟಿಯಲ್ಲಿ ರಮ್ಯಾಗೆ 420 ಸಂಖ್ಯೆ ದೊರಕಿದೆ.

      ರಮ್ಯಾಗೆ 420 ಸಂಖ್ಯೆ ದೊರಕಿರುವುದರಿಂದ ಸಾರ್ವಜನಿಕರು ವ್ಯಂಗ್ಯ ಮಾಡುತ್ತಿದ್ದು, ವಿಧಾನಸಭೆ, ನಗರಸಭೆ ಚುನಾವಣೆಯಲ್ಲಿ ಮತದಾನಕ್ಕೆ ಬಾರದಿದ್ದರಿಂದ ನಾಳೆಯಾದರೂ ಮತದಾನ ಮಾಡುವರೇ ಅಥವಾ ಮತದಾನಕ್ಕೆ ಗೈರಾಗುವರೇ ಎನ್ನುವ ಕುರಿತು ಮಂಡ್ಯ ಜನರಲ್ಲಿ ಮತ್ತೆ ಚರ್ಚೆ ಆರಂಭವಾಗಿದೆ.  

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap