ಪಾವಗಡದ ಎಸ್ ಬಿ ಐ ಶಾಖೆ ಮುಚ್ಚಲು ನಿರ್ಧಾರ

0
41

ತುಮಕೂರು :

      ಜಿಲ್ಲೆಯ ಪಾವಗಡ ತಾಲೂಕಿನ ಅರಿಸಿಕೆರೆಯ ಶಾಖೆಯನ್ನು ಮುಚ್ಚಲು ಸ್ಟೇಟ್ ಬ್ಯಾಂಕ್ ಇಂಡಿಯಾ ಮುಂದಾಗಿದೆ. 

      ರೈತರ ಸಾಲ ವಸೂಲಾಗದೆ ನಷ್ಟ ಅನುಭವಿಸುತ್ತಿರುವ ಕಾರಣದಿಂದ ಶಾಖೆಯನ್ನು ಮುಚ್ಚಲಾಗುತ್ತಿದೆ ಹೇಳಲಾಗುತ್ತಿದೆ. ಶಾಖೆಯು ಸುಮಾರು 2 ಕೋಟಿ ರೂಪಾಯಿ ಸಾಲವನ್ನು ರೈತರಿಗೆ ನೀಡಿದೆ. ಆದರೆ ಇದೂವರೆಗೂ ರೈತರಿಂದ ಸಾಲ ವಸೂಲಿ ಆಗದ ಕಾರಣ ಅಧಿಕಾರಿಗಳು ಬ್ಯಾಂಕ್ ನಷ್ಟದಲ್ಲಿದೆ ಎಂದು ವರದಿ ನೀಡಿ ಬಂದ್ ಮಾಡಲು ನಿರ್ಧರಿಸಿದ್ದಾರೆ.

       ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಂಕ್ ಆವರಣದಲ್ಲಿ ಶಾಖೆ ಮುಚ್ಚದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here