ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ!!!

0
279

ಬೆಂಗಳೂರು:

      ಸರ್ಕಾರಿ ನೌಕರರಿಗೆ ವಾರದಲ್ಲಿ 5 ದಿನ ಮಾತ್ರ ಕೆಲಸ ನಿಗದಿಪಡಿಸುವ ಬಗ್ಗೆ ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಾಗಿದೆ ಎಂದು  ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. 

      ಅವರು ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ತೀರ್ಮಾನಗಳನ್ನು ಮಾಧ್ಯಮಗಳೊಂದಿಗೆ ತಿಳಿಸುತ್ತಾ ಮಾತನಾಡಿದರು.  ಈ ಬಗ್ಗೆ ಸಚಿವ ಸಂಪುಟದ ಉಪ ಸಮಿತಿಯನ್ನು ರಚನೆ ಮಾಡಿ, ಅದು ವರದಿ ನೀಡಿದ ಬಳಿಕ ಈ ಬಗ್ಗೆ ಸ್ಷಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

       ಆರನೇ ವೇತನ ಆಯೋಗದಲ್ಲಿ ಕೂಡ ಈ ಬಗ್ಗೆ ಹೇಳಲಾಗಿದೆ. ಇದಲ್ಲೇ ಕೆಲ ಜಯಂತಿಗಳಿಗೆ ನೀಡುವ ರಜೆಯನ್ನು ಕೂಡ ರದ್ದು ಮಾಡುವುದರ ಬಗ್ಗೆ ಕೂಡ ಯೋಚಿಸಲಾಗಿದೆ ಎಂದು ತಿಳಿಸಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here