ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ : ಸುದೀಪ್

0
39

 ಬೆಂಗಳೂರು: 

      ಇದು ಎಕಾನಾಮಿ ಬಗ್ಗೆ ಸಂಬಂಧಿಸಿದ್ದು, ಪರ್ಸನಲ್ ದಾಳಿ ಅಲ್ಲ, ನಾನು ಏನಾದರೂ ತಪ್ಪು ಮಾಡಿದ್ದರೆ ಭಯ ಪಡಬೇಕು, ನಾನೇನು ತಪ್ಪು ಮಾಡಿಲ್ಲ, ನನಗೆ ಭಯವಿಲ್ಲ ಎಂದು ಐಟಿ ದಾಳಿಗೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

       ಈ ವೇಳೆ ಮಾತನಾಡಿದ ಸುದೀಪ್​​, ಐಟಿ ರೇಡ್​​ ಯಾಕೆ ಮಾಡಿದ್ದಾರೆ ಎಂಬ ಬಗ್ಗೆ ಐಡಿಯಾ ಇಲ್ಲ. ನಮ್ಮ ಪರ್ಸನಲ್​ ವಿಚಾರಕ್ಕಂತೂ ಖಂಡಿತ ದಾಳಿ ನಡೆದಿಲ್ಲ. ದಿ ವಿಲನ್, ಕೆಜಿಎಫ್ ಮತ್ತು ನಟಸಾರ್ವಭೌಮ ಸಿನಿಮಾಗಳು ಬಿಗ್ ಬಜೆಟ್ ಚಿತ್ರಗಳಾಗಿದೆ. ಆದ್ದರಿಂದ ಮೂರು ಬಿಗ್ ಬಜೆಟ್ ಕಾರಣಕ್ಕೆ ಐಟಿ ದಾಳಿ ಮಾಡಿರಬಹುದು. ಈ ಮೂರು ಸಿನಿಮಾಗೆ ಸಂಬಂಧಿಸಿದ ನಿರ್ಮಾಪಕರ ಮನೆ ಮೇಲೂ ಐಟಿ ರೇಡ್ ಆಗಿದೆ ಎಂದು ಹೇಳಿದ್ದಾರೆ.

      ಶೂಟಿಂಗ್ ನಲ್ಲಿರುವಾಗ ಐಟಿ ದಾಳಿ ಬಗ್ಗೆ ಮಾಹಿತಿ ಸಿಕ್ಕಿತು. ನನ್ನ ತಾಯಿ ಮನೆಯಲ್ಲಿ ಒಬ್ಬರೇ ಇದ್ದರು. ಅವರಿಗೆ 70 ಪ್ಲಸ್ ವಯಸ್ಸು, ಅವರಿಗೆ ತೊಂದರೆಯಾಗಬಾರದು ಎಂದು ಕೂಡಲೇ ಹೊರಟು ಬಂದೆ. ಇಲ್ಲದಿದ್ದರೆ ಅಲ್ಲಿಂದಲೇ ಹ್ಯಾಂಡಲ್​​​ ಮಾಡ್ತಿದ್ದೆ ಎಂದು ಸುದೀಪ್​​ ಹೇಳಿದ್ರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here