ಏರ್ ಷೋ ವೇಳೆ ವಿಮಾನಪಘಾತ : ಓರ್ವ ಪೈಲಟ್ ಸಾವು!! : ವಿಡಿಯೋ

ಬೆಂಗಳೂರು : 

      ಬೆಂಗಳೂರು ಏರ್ ಶೋ ತರಬೇತಿ ವೇಳೆ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದಲ್ಲಿ ಒಬ್ಬ ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

      ಮಂಗಳವಾರ ಯಲಹಂಕ ವಾಯುನೆಲೆ ಬಳಿಯ ಗಂಟಿಗಾನಹಳ್ಳಿ ಬಳಿ ಈ ಘಟನೆ ನಡೆದಿದೆ. ತರಬೇತಿ ವೇಳೆ ವಿಮಾನಗಳು ಡಿಕ್ಕಿಯಾಗಿದ್ದು, ಪೈಲೆಟ್‌ಗಳು ತುರ್ತು ನಿರ್ಗಮನ ದ್ವಾರದಿಂದ ಹೊರಗೆ ಜಿಗಿದ್ದಾರೆ, ಒಬ್ಬ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

     ವಿಮಾನದ ಅವಶೇಷಗಳು ಯಲಹಂಕ ನ್ಯೂಟೌನ್‍ನ ಇಸ್ರೊ ಲೇಔಟ್‍ನಲ್ಲಿ ಬಿದ್ದಿವೆ. 

 

      ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಡಿಜಿ ಆಫ್ ಪೊಲೀಸ್ ಮತ್ತು ಫೈರ್ ಎಮರ್ಜನ್ಸಿ ಸರ್ವಿಸ್ ಎಂ.ಎನ್. ರೆಡ್ಡಿ, ವಿಮಾನ ಅಪಘಾತದಲ್ಲಿ ಒಬ್ಬ ಐಎಎಫ್ ಪೈಲಟ್ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಐಪಿಎಸ್ ಅಧಿಕಾರಿ ರೆಡ್ಡಿ, ಪ್ರತಿ ವಿಮಾನದಲ್ಲಿ ಒಬ್ಬ ಪೈಲಟ್ ಹಾಗೂ ಒಬ್ಬ ಕೋ ಪೈಲಟ್ ಇದ್ದರು, ಇದರಲ್ಲಿ ಸದ್ಯ ಒಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬ ಪೈಲಟ್ ಎಲ್ಲಿದ್ದಾರೆ ಎಂದು ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap