ಶೌಚಾಲಯದಲ್ಲಿ ಪತ್ತೆಯಾಯ್ತು ಯುವಕನ ಮೃತದೇಹ!!!

0
30

ಉಡುಪಿ:

      ಗಂಗೊಳ್ಳಿಯ ಬಾಬಾಷಾ ಮೊಹಲ್ಲಾದ ಅಲ್ ಫಲಾ ಮಸೀದಿಯ ಶೌಚಾಲಯದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ.

       ಮೃತ ವ್ಯಕ್ತಿಯನ್ನು ಕುಂದಾಪುರ ಸಮೀಪದ ಕೋಣಿ ಮೂಲದ ವ್ಯಕ್ತಿ ಸುರೇಶ್ ಮೊಗವೀರ (35) ಎಂದು ಗುರುತಿಸಲಾಗಿದೆ. ಗಂಗೊಳ್ಳಿಯ ಬಾಬಾಷಾ ಮೊಹಲ್ಲಾದ ಪರಿಸರದಲ್ಲಿ ಕೂಲಿ ಕೆಲಸ, ವಾಹನ ತೊಳೆಯುವುದು, ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಸುರೇಶ್ ವಿಪರೀತ ಕುಡಿತದ ಚಟ ಹೊಂದಿದ್ದರು ಎಂದು ಹೇಳಲಾಗಿದೆ.

      ಸುರೇಶ್ ಮೊಗವೀರ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಿನ್ನೆಲೆಯಲ್ಲಿ ಮನೆಯಲ್ಲಿ ಜಗಳವಾಡಿ 8-10 ವರ್ಷದಿಂದ ಗಂಗೊಳ್ಳಿಯಲ್ಲೇ ವಾಸವಾಗಿದ್ದರು ಎಂದು ಹೇಳಲಾಗಿದೆ. ಸುರೇಶ್‌ ಮೊಗವೀರ ಮಲ ವಿಸರ್ಜನೆಗೆ ತೆರಳಿದಾಗ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

      3 ದಿನಗಳಿಂದ ಅನಾರೋಗ್ಯವಿದ್ದರೂ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು ಎಂದು ಸುರೇಶ್ ಸಾವಿನ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here