ಬೆಂಗಳೂರು
ತಮಿಳುನಾಡು ಮೂಲದ ತಾಯಿಯೊಬ್ಬರು ನಗರದಿಂದ ಪಾಟ್ನಾಗೆ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲೇ ಹೋಗುತ್ತಿದ್ದಾಗ ಮಾಲೂರಿನ ಟೇಕಲ್ ಬಳಿ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ.
ಬೆಂಗಳೂರಿನಿಂದ-ಪಾಟ್ನಾಗೆ ತೆರಳುತ್ತಿದ್ದ ಸಂಘಮಿತ್ರ ಎಕ್ಸ್ ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದ ತಮಿಳುನಾಡು ಕಾಟ್ಪಡಿ ಮೂಲದ 25 ವರ್ಷದ ಮಾಲತಿ ಎನ್ನುವ ಮಹಿಳೆಗೆ ಮಾಲೂರು ಬಳಿ ನೋವು ಕಾಣಿಸಿಕೊಂಡು ಟೇಕಲ್ ಬಳಿ ಹೆರಿಗೆ ಆಗಿದೆ.
ಮಾಲತಿ ಹಾಗೂ ಮುನಿಸ್ವಾಮಿ ದಂಪತಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಹೆರಿಗೆಗಾಗಿ ಬೆಂಗಳೂರಿನಿಂದ ಕಾಟ್ ಪಡಿಗೆ ತೆರಳುತ್ತಿದ್ದ ವೇಳೆ ಟೇಕಲ್ ಬಳಿ ರೈಲಿನಲ್ಲೇ ಹೆರಿಗೆಯಾಗಿದೆ. ತಾಯಿ ಮಗು ಆರೋಗ್ಯವಾಗಿದ್ದು, ಕೂಡಲೇ ಸಹ ಪ್ರಯಾಣಿಕರು 108 ಗೆ ಕರೆ ಮಾಡಿ ತಾಯಿ ಮಗು ಇಬ್ಬರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ