ವಾಟ್ಸ್‌ಆಪ್‌ನ “Delete for Everyone” ಆಪ್ಷನ್ ನಲ್ಲಿ ಬದಲಾವಣೆ

Related image

      ಸಾಮಾಜಿಕ ಜಾಲತಾಣದಲ್ಲೊಂದಾದ ಫೇಸ್‌ಬುಕ್‌ ಒಡೆತನದಲ್ಲಿರುವ ಜನಪ್ರಿಯ ಮೇಸೆಂಜಿಂಗ್‌ ಆಪ್‌ ವಾಟ್ಸ್‌ಆಪ್‌ ತನ್ನ ಪ್ರಮುಖ ಫೀಚರ್‌ನಲ್ಲಿ ಬದಲಾವಣೆಯನ್ನು ತಂದಿದೆ. ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ನಲ್ಲಿ ಬದಲಾವಣೆ ತಂದಿರುವ ವಾಟ್ಸ್‌ಆಪ್‌ ಮೆಸೇಜ್‌ ಡಿಲೀಟ್‌ ಮಾಡುವ ಸಮಯವನ್ನು ವಿಸ್ತರಿಸುವ ತಯಾರಿಯಲ್ಲಿದೆ.

          ವಾಟ್ಸ್‌ಆಪ್‌ನ ಬೆಟಾ ಆವೃತ್ತಿಯ WABetaInfo ಎಂಬ ಟ್ವಿಟ್ಟರ್‌ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಪ್ರಕಟಿಸಿರುವ ವಾಟ್ಸ್‌ಆಪ್‌ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಮತ್ತೊಂದು ಆಯ್ಕೆಯನ್ನು ತರುತ್ತಿದ್ದು, ವಾಟ್ಸ್‌ಆಪ್‌ ಬಳಕೆದಾರರಿಗೆ ಈ ಫೀಚರ್‌ನ ಬದಲಾವಣೆ ಯಾವ ರೀತಿ ಅನುಕೂಲವಾಗುತ್ತದೆ ಎಂಬುದಕ್ಕೆ ಕಾಯಬೇಕಿದೆ.

ಆದ ಬದಾಲವಣೆ ಏನು ?

Related image

      ಡಿಲೀಟ್ ಮಾಡುವ ಸಮಯದಲ್ಲಿ ವಾಟ್ಸ್‌ಆಪ್‌ ಭಾರೀ ವಿಸ್ತರಣೆಯನ್ನು ಮಾಡಿದೆ. ಈ ಮೊದಲು ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ಗೆ 1 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಕಾಲಾವಕಾಶವನ್ನು ನೀಡಿದ್ದ ವಾಟ್ಸ್‌ಆಪ್‌ ಈಗ ಆ ಸಮಯವನ್ನು ವಿಸ್ತರಿಸಿ 13 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಕಾಲಾವಕಾಶವನ್ನು ಮೆಸೇಜ್‌ ಡಿಲೀಟ್‌ ಮಾಡಲು ನೀಡುತ್ತಿದೆ.

          ವಾಟ್ಸ್‌ಆಪ್‌ ಸಮಯ ವಿಸ್ತರಿಸಿ ಬಳಕೆದಾರರಿಗೆ ಉತ್ತಮ ಆಯ್ಕೆಯನ್ನು ನೀಡಿದೆ. ಆದರೆ, ಒಂದಿಷ್ಟು ಕಡೆ ನೀವು ಡಿಲೀಟ್‌ ಫಾರ್‌ ಎವರಿಒನ್‌ ಆಯ್ಕೆ ಕ್ಲಿಕ್ ಮಾಡಿದರು ಮೆಸೇಜ್‌ ಅಳಿಸಲ್ಲ ಎಂದು ಕೂಡ ಹೇಳಿದೆ. ಹೌದು, 13 ಗಂಟೆ 8 ನಿಮಿಷ 16 ಸೆಕೆಂಡ್‌ಗಳ ಒಳಗೆ ನೀವು ಮೆಸೇಜ್‌ನ್ನು ಎಲ್ಲರ ನಂಬರ್‌ನಿಂದ ಡಿಲೀಟ್‌ ಮಾಡಬಹುದು. ಆದರೆ, ಒಂದು ವೇಳೆ ಫೋನ್‌ ಸ್ವಿಚ್‌ ಆಫ್‌ ಆಗಿ ನಿಮ್ಮ ಮೆಸೇಜ್‌ ಸ್ವೀಕೃತವಾಗಿರದಿದ್ದರೆ ನಿಮ್ಮ ಮೆಸೇಜ್‌ ಡಿಲೀಟ್‌ ಆಗಲ್ಲ ಎನ್ನುವುದನ್ನು ನಾವು ಮರೆಯುವಂತಿಲ್ಲ.

ಮೊದಲಿದ್ದ ಸಮಯ :


Related image      ಇದುವರೆಗೂ ವಾಟ್ಸ್‌ಆಪ್‌ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್‌ನಲ್ಲಿ ಸಮಯವನ್ನು ವಿಸ್ತರಿಸುತ್ತಾ ಬಂದಿದೆ. ಈಗ ಆಗಿರುವ ವಿಸ್ತರಣೆ ಎರಡನೇಯ ಬಾರಿಯದ್ದಾಗಿದೆ. ವರ್ಷಾರಂಭದಲ್ಲಿ ಡಿಲೀಟ್‌ ಫಾರ್‌ ಎವರಿಒನ್‌ ಆಯ್ಕೆಯನ್ನು ಪರಿಚಯಿಸಿದ್ದ ವಾಟ್ಸ್‌ಆಪ್‌ ಕೇವಲ 7 ನಿಮಿಷಗಳ ಅವಕಾಶವನ್ನು ಮಾತ್ರ ಬಳಕೆದಾರನಿಗೆ ಮೆಸೇಜ್‌ ಡಿಲೀಟ್‌ ಮಾಡಲು ಅವಕಾಶ ನೀಡಿತ್ತು ಎಂದು ವಿವರಿಸಲಾಗಿದೆ.

ವಿಡಿಯೋ ಕಾಲ್‌ ಸಮಸ್ಯೆಗೆ ಪರಿಹಾರ

Related image

      ವಾಟ್ಸ್‌ಆಪ್‌ ವಿಡಿಯೋ ಕಾಲ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಸಮಸ್ಯೆಯನ್ನು ವಾಟ್ಸ್‌ಆಪ್‌ ಬಗೆಹರಿಸಿದ್ದು, ಆಂಡ್ರಾಯ್ಡ್‌ ಮತ್ತು iOSಗಳಲ್ಲಿ ಅಪ್‌ಡೇಟ್‌ ಮಾಡುವ ಮೂಲಕ ವಿಡಿಯೋ ಕಾಲ್‌ನಲ್ಲಿನ ಸಮಸ್ಯೆಗೆ ಇತಿಶ್ರೀ ಹಾಡಿದೆ.

 

 

 

Recent Articles

spot_img

Related Stories

Share via
Copy link
Powered by Social Snap