ಹಿರಿಯೂರು :
ಅಭಿಮತ ಪತ್ರಿಕಾ ಬಳಗ ಬಹಳಷ್ಟು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂಬುಲೆನ್ಸ್ ಡ್ರೈವರ್‍ಗಳಿಗೆ, ದಕ್ಷಅಧಿಕಾರಿಗಳಿಗೆ, ಆಟೋಚಾಲಕರಿಗೆ ಪೌರಕಾರ್ಮಿಕರಿಗೆ ಶ್ರಮಿಕ ವರ್ಗದ ಹಮಾಲಿ ಬಂಧುಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂಬುದಾಗಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡ ಜಿ.ಎಸ್.ಮಂಜುನಾಥ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಅಭಿಮತ ಕನ್ನಡ ವಾರಪತ್ರಿಕೆ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಯ ಸಂಪಾದಕರಾದ ಜಿ.ಎಲ್.ಮೂರ್ತಿಯವರು ಪ್ರಾಸ್ತಾವಿಕ ಮಾತನಾಡಿದರು. ಪ್ರೋ.ಬಸವರಾಜ್ ಉಪನ್ಯಾಸ ನೀಡಿದರು.ಜಿಲ್ಲಾ ಪತ್ರಕರ್ತ ಅಧ್ಯಕ್ಷರಾದ ನಗರಂಗೆರೆ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ವೃತ್ತ ನಿರೀಕ್ಷಕರಾದ ಕೆ.ಟಿ.ಗುರುರಾಜ್, ಉಪನಿರೀಕ್ಷಕರಾದ ಮಂಜುನಾಥ್, ಜಿಲ್ಲಾ ಡಿ.ಎಸ್.ಎಸ್.ಬೋರನಕುಂಟೆ ಜೀವೇಶ್, ರೈತಸಂಘದ ಅಧ್ಯಕ್ಷ ಹೊರಕೇರಪ್ಪ, ರಂಗಪ್ಪಯಾದವ್, ವಿ.ಹೆಚ್.ರಾಜು, ಗುರುಶ್ಯಾಮಯ್ಯ, ಎ.ಆರ್.ಧನಂಜಯ, ಪಿ.ಕೃಷ್ಣಮೂರ್ತಿ, ಅರುಣ್‍ಕುಮಾರ್, ಮಾರುತಿ, ಗಿರಿಧರ್, ಶಿವಶಂಕರಮಠದ್, ಮಹಾಸ್ವಾಮಿ, ನಂದಕುಮಾರ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕೊನೆಯಲ್ಲಿ ದಾವಣಗೆರೆಯ ದಿಯಾ ಮೆಲೋಡಿಯವರಿಂದ ಆರ್ಕೇಸ್ಟ್ರಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
