ಬೆಂಗಳೂರು
ರಾಜ್ಯ ಸರ್ಕಾರ ಉಚಿತ ನೀಡುವ ಖಾತ್ರಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲವೆಂದು ಮುಖ್ಯಮಂತ್ರಿ ಯಾವ ಇಲಾಖೆಗೂ ಹೇಳಿಲ್ಲ ಎಂದು ಮೀನುಗಾರಿಕೆ, ಬಂದರು ಸಚಿವ ಮಂಕಾಳ್ ವೈದ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ರೀತಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುವುದಿಲ್ಲ. ಎಲ್ಲಾ ರೀತಿಯ ಅನುದಾನ ಸಿಕ್ಕಿ ಅಭಿವೃದ್ಧಿ ಆಗಲಿದೆ. ಅಭಿವೃದ್ದಿ ಕಾರ್ಯಗಳಿಗೆ ಅನುದಾನದ ಕೊರತೆ ಆಗುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
500 ಕೋಟಿ ರೂ. ನಮ್ಮ ಇಲಾಖೆಗೆ ಅನುದಾನ ಬೇಕಿದೆ. ಹಾಗಾಗಿ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಭೆ ಮಾಡಿದ್ದೇನೆ. ಎಲ್ಲೆಡೆ ಹೋಗಿ ಸಮಸ್ಯೆ ಆಲಿಸಿ, ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಕಡಲ ಕೊರೆತ ಹೆಚ್ಚಾಗಿದೆ. ಮುಂಗಾರು ಸಂದರ್ಭದಲ್ಲಿ ಕಡಲ ಕೊರೆತ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಹೇಳಿದರು.
ಮೀನುಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ. 300 ಕಿ.ಮೀ ದೂರ ಕಡಲು ಇದೆ. ಎಲ್ಲಿ ಹೆಚ್ಚು ಕಡಲ ಕೊರೆತ ಇದೆ ಅದನ್ನು ಗುರ್ತಿಸುವ ಕೆಲಸ ಆಗಿದೆ. ಕಾರವಾರದಲ್ಲಿ, ಮಲ್ಪೆ, ಬಂದರು ಅರ್ಧಕ್ಕೆ ನಿಂತಿದೆ. ಅರ್ಧ ನಿಂತಿರೋದನ್ನು ಪೂರ್ಣ ಮಾಡುವ ಕೆಲಸ ಮೊದಲು ಮಾಡುತ್ತೇವೆ.ನಂತರ ಪ್ರಾರಂಭ ಆಗದ ಕಾಮಗಾರಿ ಮಾಡುತ್ತೇವೆಎಂದು ಅವರು ತಿಳಿಸಿದರು.
ಉತ್ತರ ಕನ್ನಡಕ್ಕೆ ಮೆಡಿಕಲ್ ಕಾಲೇಜು ನಾವು ಹಿಂದೆ ತೆಗೆದುಕೊಂಡು ಹೋಗಿದ್ದೆವು. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ನಿರ್ಧಾರ ಮಾಡಿದ್ದೇವೆ. ನಮ್ಮ ಜನರು ಹೊನ್ನಾವರ, ಭಟ್ಕಳ, ಕುಮಟಾದಲ್ಲಿ ಆಗಬೇಕು ಎಂದು ಹೇಳುತ್ತಾರೆ. ಶೀಘ್ರವೇ ನೂರು ಬೆಡ್ ಆಸ್ಪತ್ರೆ ಬೇಕು.ಅಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
