ಅಹಿಂಸೆಯನ್ನು ತ್ಯಜಿಸಿ ಪರಮಾತ್ಮನ ಮೊರೆಹೋಗಿ

ಸಿರುಗುಪ್ಪ:

      ಶ್ರೀ ಕೃಷ್ಣ ವಿಶ್ವವನ್ನೆ ಗೆದ್ದಿರುವ ಮಹಾಪುರಷನಾಗಿದ್ದು, ದುಷ್ಟ ಸಂಹಾರಕ, ಶಿಷ್ಟ ರಕ್ಷಕನಾಗಿದ್ದಾನೆ. ಎಲ್ಲರ ಹೃದಯದಲ್ಲಿ ಶ್ರೀಕೃಷ್ಣನು ನೆಲೆಸಿದ್ದು, ಭಗವಂತನು ಸರ್ವಾಂತಾರ್ಯಾಮಿ ಯಾಗಿದ್ದಾನೆ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

      ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಭೋದಿಸಿರುವಂತೆ ಅಹಿಂಸೆಯನ್ನು ತ್ಯಜಿಸಿ ಪರಮಾತ್ಮನ ಮೊರೆಹೋದಲ್ಲಿ ಭಗವಂತನು ನಮ್ಮನ್ನು ರಕ್ಷಿಸುತ್ತಾನೆ. ಶ್ರೀಕೃಷ್ಣನ ದಯೆಯಿಂದ ಅನಾವೃಷ್ಟಿ ತೊಲಗಿ ಸಮೃದ್ಧಿ ದೊರೆಯಲಿ ಎಂದು ಆಶಿಸಿದರು.

      ತಹಶೀಲ್ದಾರ್ ಎಂ.ಸುನಿತ ಮಾತನಾಡಿ ಮನುಕುಲಕ್ಕೆ ಒಳಿತ ಮಾರ್ಗವನ್ನು ತೋರಿದ ಜಗದ್ಗುರು ಶ್ರೀಕೃಷ್ಣ, ಮಾನವರು ಸಂಕಷ್ಟದಲ್ಲಿರುವಾಗ ಶ್ರೀಕೃಷ್ಣನ ಮೊರೆಹೋದಲ್ಲಿ ನಿವಾರಣೆ ಸಾಧ್ಯ ಎಂದು ತಿಳಿಸಿದರು.

      ವಿಶೇಷ ಉಪನ್ಯಾಸದಲ್ಲಿ ಡಾ.ಮಧುಸೂದನ ಕಾರಿಗನೂರು ಮಾತನಾಡಿ ಶ್ರೀಕೃಷ್ಣನು ಹುಟ್ಟಿದ್ದು ಕ್ರಿ.ಪೂ.21.07.3227ರಂದು ಹಾಗೂ ಐಕ್ಯವಾಗಿದ್ದು, 18-02-3102ಎನ್ನುವುದಾಗಿದ್ದು 5345ವರ್ಷಗಳ ಹಿಂದೆಯೇ ಶ್ರೀಕೃಷ್ಣನ ಇರುವಿಕೆಯ ಬಗ್ಗೆ ಹಾಗೂ 125ವರ್ಷಗಳ ಕಾಲ ಜೀವಿಸಿರುವ ಬಗ್ಗೆ ವೈಜ್ಞಾನಿಕ ಸಂಶೋಧನೆಗಳಿಂದ ತಿಳಿದು ಬಂದಿದೆ.

      ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಭಗದ್ಗೀತೆಯನ್ನು ಅಧ್ಯಾಯನದ ವಿಷಯವನ್ನಾಗಿ ಆಡಳಿತ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಭೋಧಿಸಲಾಗುತ್ತಿದೆ. ಇದರಿಂದ 16ದಿನಗಳಲ್ಲಿ 18 ಅಧ್ಯಾಯಗಳಲ್ಲಿ ಸಂಪೂರ್ಣ ಆಡಳಿತಾತ್ಮಕ ಕೌಶಲ್ಯಗಳನ್ನು ಶ್ರೀಕೃಷ್ಣನು ಅರ್ಜುನನಿಗೆ ಭೋದಿಸಿದ್ದಾನೆ.

      ಶ್ರೀ ಕೃಷ್ಣನ ಬಾಲ್ಯ ಮಕ್ಕಳಿಗೆ ಶ್ರೀ ಕೃಷ್ಣನ ಹರೆಯ ಗೋಪಿಕೆಯರಿಗೆ ಯುದ್ದ ಸನ್ನಿವೇಶಗಳಲ್ಲಿ ಹಿರಿಯರಿಗೆ ಹೀಗೆ ಶ್ರೀ ಕೃಷ್ಣನು ಎಲ್ಲರಿಗೂ, ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತಾನೆ. ಶ್ರೀ ಕೃಷ್ಣನನ್ನು ಕಾಣಬೇಕಾದರೆ ಗೋವುಗಳನ್ನು ರಕ್ಷಿಸಿ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಹೆಚ್.ಬಿ.ಗಂಗಪ್ಪ ಮಾತನಾಡಿದರು. ತಾ.ಪಂ.ಇ.ಒ. ಶಿವಪ್ಪ ಸುಬೇದಾರ್, ಬಿ.ಸಿ.ಎಂ.ಅಧಿಕಾರಿ ಶ್ಯಾಮಪ್ಪ, ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಶಂಕ್ರಪ್ಪ, ಯಾದವ ಸಂಘದ ತಾ.ಅಧ್ಯಕ್ಷ ಪಕ್ಕೀರಪ್ಪ ಅರಳಿಗನೂರು, ಮುಖಂಡರಾದ ಚೊಕ್ಕಬಸವನಗೌಡ, ಡಿ.ಸೋಮಪ್ಪ, ಶಾಂತಮೂರ್ತಿಸ್ವಾಮಿ, ನಾಗೇಶಪ್ಪ, ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥರು, ತಾ.ಪಂ.ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link