ತುಮಕೂರು
ತುಮಕೂರು ನಗರದಲ್ಲಿ ಸರಸ್ ಫೌಂಡೇಷನ್ ವತಿಯಿಂದ 71 ನೇ ತಿಂಗಳಿನ “ಡಿವಿಜಿ ನೆನಪು” ಉಪನ್ಯಾಸ ಕಾರ್ಯಕ್ರಮ ಆಗಸ್ಟ್ 28 ರಂದು ಮಂಗಳವಾರ ಸಂಜೆ 6-30 ರಿಂದ 8 ಗಂಟೆಯವರೆಗೆ ತುಮಕೂರು ನಗರದ ಸೋಮೇಶ್ವರ ಪುರಂ ಮುಖ್ಯರಸ್ತೆಯಲ್ಲಿರುವ ಗಾಯತ್ರಿ ಸಮುದಾಯ ಭವನದಲ್ಲಿ ಏರ್ಪಟ್ಟಿದೆ.
ಉಪನ್ಯಾಸ ಮಾಲಿಕೆಯ ಪ್ರಧಾನ ಉಪನ್ಯಾಸಕರಾದ ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅವರು ಡಿವಿಜಿ ವಿರಚಿತ “ಮರುಳ ಮುನಿಯನ ಕಗ್ಗ”ದಲ್ಲಿರುವ “ಜಗಳವೇತಕೊ ತಮ್ಮ ನಿನಗೆನಗೆ ಸರ್ವರಿಗೆ” ಎಂಬ ಮುಕ್ತಕದ ಬಗ್ಗೆ ಉಪನ್ಯಾಸ ನೀಡುವರು.
ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ವಿಜ್ಞಾನಿ ಬಿ.ಕೆ.ವೆಂಕಟರಾಮು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಸರಸ್ ಫೌಂಡೇಷನ್ ಅಧ್ಯಕ್ಷ ಆರ್.ವಿಶ್ವನಾಥನ್ ತಿಳಿಸಿದ್ದಾರೆ.