ಆಧಾರ್‌ ಪಾನ್‌ ಲಿಂಕ್‌ ಆಗಿಲ್ವಾ : ಇಲ್ಲಿದೆ ಉಪಯುಕ್ತ ಮಾಹಿತಿ

ತುಮಕೂರು:

      ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಗುರುತಿನ ಆಧಾರವೇ  ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್. ಇವೆರಡೂ ಇಲ್ಲದೆ ಇದ್ದಲ್ಲಿ ನೀವು ದೇಶದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ ಅಷ್ಟೇ ಅಲ್ಲದೆ ಸರ್ಕಾರದಿಂದ ಘೋಷಿತವಾಗಿರುವ ಯಾವುದೇ ಸೌಲಭ್ಯಗಳು ಕೂಡ ನಿಮಗೆ ಸಿಗುವುದಿಲ್ಲ. ಹಾಗಾಗಿ ಆಧಾರ್ ಮತ್ತು ಪ್ಯಾನ್ ಕಾರ್ಡ್  ಎಲ್ಲಾ ಭಾರತೀಯ ನಾಗರಿಕರಿಗೂ ಕಡ್ಡಾಯವಾಗಿ ಬೇಕೇ ಬೇಕು. ಇದರ ಜೊತೆಗೆ ಆಧಾರ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ನಂಬರ್ ಲಿಂಕ್ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆದರೆ ನೀವು ಎಲ್ಲಿ ಯಾವ ಕೆಲಸ ಮಾಡಿಸುವಾಗ ನಿಮ್ಮ ದಾಖಲೆಗಳು ರಿಜಿಸ್ಟರ್ ಆಗಿರುತ್ತವೆ.

     ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಈಗಾಗಲೇ ಸಾಕಷ್ಟು ಬಾರಿ ಗಡವಿನ ವಿಸ್ತರಣೆ ಕೂಡ ಮಾಡಿದೆ. ಈ ಹಿಂದೆ ಮಾರ್ಚ್ 30-2023 ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಅದು ಜೂನ್ ತಿಂಗಳಿನ ವರೆಗೂ ಮುಂದುವರೆದು ಈ ತಿಂಗಳ ಕೊನೆಯವರೆಗೂ ಚಾಲ್ತಿಯಲ್ಲಿ ಇರಬಹುದು.

    ಆದರೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಅಥವಾ ನಿಗದಿತ ದಿನಾಂಕದೊಳಗೆ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ 10,000 ವರೆಗೆ ಸರ್ಕಾರ ದಂಡ ವಿಧಿಸುತ್ತದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಸಾಕಷ್ಟು ವೈರಲ್ ಆಗಿತ್ತು. ಹಾಗೆ ನೀವು ಅಂದುಕೊಂಡಿದ್ದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದರೂ ಕೂಡ ಇದು ಲಿಂಕ್ ಆಗದೆ ಇದ್ದಲ್ಲಿ ನೀವು ಭಾರಿ ದಂಡ ತೆರಬೇಕು ಎನ್ನುವ ಸುದ್ದಿ ಸುಳ್ಳು ಎಂಬುದಾಗಿ ವರದಿಯಾಗಿದೆ.

     ಜೂನ್ 15ರವರೆಗೆ ಅದರ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ದಿನಾಂಕ ನಿಗದಿಪಡಿಸಲಾಗಿತ್ತು. ಇದೀಗ ಜೂನ್30 ರ ವರೆಗೂ ಈ ಗಡುವನ್ನು ಸರ್ಕಾರ ವಿಸ್ತರಿಸಿದೆ. ಆದರೆ ನೀವು ಇದಕ್ಕೆ ಹತ್ತು ಸಾವಿರ ರೂಪಾಯಿಗಳ ದಂಡ ಪಾವತಿಸಬೇಕಾಗಿಲ್ಲ. ಜೂನ್ 30ರ ಒಳಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ದಂಡ ಪಾವತಿಸಬೇಕು.

     ಜೂನ್ 30ರ ಒಳಗೆ ಅಂದರೆ ಈಗ ನೀವು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಾವಿರ ರೂಪಾಯಿಗಳ ಶುಲ್ಕ ಪಾವತಿಸಬೇಕು. ಅದೇ ನೀವು ಈ ತಿಂಗಳ ಕೊನೆ ದಿನಾಂಕದ ಒಳಗೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಂಡರೆ ಮತ್ತೆ ನಿಮಗೆ ದಂಡ ಪಾವತಿಸುವ ಅಗತ್ಯ ಇರುವುದಿಲ್ಲ. ಈಗ ಪಾವತಿಸುವ ಸಾವಿರ ರೂಪಾಯಿಗಳು ಶುಲ್ಕ ಎಂದು ಪರಿಗಣಿಸಲ್ಪಡುತ್ತವೆ.

    ಇನ್ನು ನೀವು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಪ್ಯಾನ್ ಕಾರ್ಡ್ ಅಮಾನ್ಯ ವಾಗುತ್ತದೆ. ನೀವು ಈ ಅಮಾನ್ಯವಾಗಿರುವ ಪ್ಯಾನ್ ಕಾರ್ಡ್ ಮೂಲಕ ಯಾವುದೇ ಹಣಕಾಸಿನ ವ್ಯವಹಾರ ಮಾಡುವಂತಿಲ್ಲ. ಸರ್ಕಾರದ ಸೌಲಭ್ಯಗಳು ದೊರೆಯುವುದಿಲ್ಲ. ಹಾಗೇನಾದರೂ ನೀವು ಅಮಾನ್ಯವಾಗಿರುವ ಪ್ಯಾನ್ ಕಾರ್ಡ್ ಅನ್ನು ಬಳಸಿ ಹಣಕಾಸಿನ ವ್ಯವಹಾರ ಮಾಡಿದರೆ ಅದು ತೆರಿಗೆ ಇಲಾಖೆಗೆ ತಿಳಿದು ಬಂದರೆ ಆಗ ಹತ್ತು ಸಾವಿರ ರೂಪಾಯಿಗಳ ವರೆಗೂ ದಂಡ ಪಾವತಿಸಬೇಕಾಗುತ್ತದೆ.

    ಜೊತೆಗೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗಬಹುದು. ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಜೊತೆಗೆ ಈ ವಿಚಾರವನ್ನು ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಯಾರಿಗೆ ಆಧಾರ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗಬೇಕು ಅವರಿಗೆ ಈ ವಿಚಾರವನ್ನು ತಿಳಿಸಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap