ಇರುವುದೆಲ್ಲವ ಬಿಟ್ಟು
ಇರದ ಜಗವ ಹುಡುಕುವವರು ನಾವು
ಪರರ ನೋಡಿ ಬದುಕು ಏಕೆ
ಇರಲಿ ಇತಿಮಿತಿಗಳ ಅರಿವು
ಬಾಳು ಕಡಿಮೆಯಾದರೇನು
ಅರಳಿ ನಗುವ ತೋರುವುದು ಹೂವು
ಕ್ಷಣ ಕ್ಷಣವೂ ಆಲಂಗಿಸು
ಸಿಗದು ಮತ್ತೆ ಮನುಜ ಕುಲವು
ನಾಲ್ಕು ದಿನ ಹೆಚ್ಚಾದರೆ
ಕೊಳೆತ ಗೊಬ್ಬರ ಈ ಸಿಹಿ ಮಾವು
ಜೀವನಕ್ಕೆ ಜೀವ ತುಂಬಿ
ಹಂಚೊಣ ಸಿಹಿ ನೆನಪುಗಳನು ನಾವು
ಜೀವನವು ಬರೀ ಸವಿಯಲ್ಲ
ಇರುವದು ಜೊತೆಗೆ ಬೇವು
ಸಿಕ್ಕ ಸವಿಯನು ಸವಿಯಬೇಕಿದೆ
ಬರುವ ಮುನ್ನ ಸಾವು!
ಮಹಾಂತೇಶ ಮಾಗನೂರ, ಬೆಂಗಳೂರು
