ಹರಪನಹಳ್ಳಿ:
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಈದ್-ಮಿಲದ್ ಹಾಗೂ ವಾಲ್ಮೀಕಿ ಜಯಂತಿ ಪ್ರಯುಕ್ತ ಶಾಂತಿ ಸಭೆ ಜರುಗಿತು.ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಈದ್-ಮಿಲದ್ ಹಾಗೂ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಬೇಕು ಎಂದು ಪ್ರಾಸ್ತಾವಿಕವಾಗಿ ಪಿಎಸ್‍ಐ ಸಿ.ಪ್ರಕಾಶ್ ಹೇಳಿದರು.
ಸಭೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಮುಜುಬರ್ ರೆಹಮಾನ್ ಮಾತನಾಡಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕ್ಷೇತ್ರದಲ್ಲಿ ಈದ್-ಮಿಲದ್ ಆಚರಣೆಗೆ ಅವಕಾಶ ನೀಡುತ್ತಿದ್ದಾರೆ ಆದರೆ ಬಿಜೆಪಿ ಶಾಸಕರು ಇರುವ ಕ್ಷೇತ್ರದಲ್ಲಿ ಈದ್-ಮಿಲದ್ ಆಚರಣೆ ಅವಕಾಶ ನೀಡುತ್ತಿಲ್ಲ ಇಲಿಯೂ ಸಹ ಅದೇ ಪರಿಸ್ಥಿತಿ ಇದೇ ಈ ರೀತಿ ಯಾಕೆ ತಾರತಮ್ಯ ಎಂದು ಪೆÇೀಲೀಸರ ಗಮನಕ್ಕೆ ತಂದರೂ
ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‍ಐ ಪ್ರಕಾಶ್ ಅವರು ಇದು ಶಾಂತಿ ಸಭೆ ಇಲ್ಲಿ ರಾಜಕೀಯ ಬೆರೆಸುವುದು ಮಾತನಾಡೋದು ಬೇಡ ಸರ್ಕಾರದ ಮಾರ್ಗಸೂಚಿಗಳು ನಿಯಮಗಳು ಎಲ್ಲರಿಗೂ ಒಂದೇ ತಮ್ಮ ಅಬಿಪ್ರಾಯಗಳನ್ನ ಅಷ್ಟೇ ತಿಳಿಸಿ ಎಂದು ಖಡಕ್ ಗಾಗಿ ಸಭೆಯಲ್ಲಿ ಮುಜುಬರ್ ರೆಹಮಾನ್ ಅವರಿಗೆ ಹೇಳಿದರು.
ಮುಸ್ತಖ್ ಅಹಮ್ಮದ್ ಮಾತನಾಡಿ ಪಕ್ಕದ ಹಡಗಲಿ ಬೊಮ್ಮನಹಳ್ಳಿ ಹರಿಹರ ಹಾಗೂ ದಾವಣಗೆರೆ ತಾಲೂಕುಗಳಲ್ಲಿ ಸರ್ಕಾರದ ಷರತ್ತುಗಳನ್ನು ಸಡಿಲಿಸಿ ಈದ್-ಮಿಲದ್ ಆಚರಣೆಗೆ ಅವಕಾಶ ನೀಡಿದ್ದಾರೆ ಇಲ್ಲಿಯೂ ಸಹ ಅದೇ ರೀತಿಯಲ್ಲಿ ಆಚರಣೆಗೆ ಅವಕಾಶ ಮಾಡಿ ಕೊಡಬೇಕು ಎಂದು ಕೇಳಿಕೊಂಡರು
ಇದಕ್ಕೆ ಪ್ರತಿಕ್ರಿಯಿಸಿದ ಸಿಪಿಐ ನಾಗರಾಜ್ ಎಂ.ಕಮ್ಮಾರ ನೀವು ತಪ್ಪಾಗಿ ಮಾಹಿತಿ ಪಡೆದುಕೊಂಡಿದದ್ದೀರಿ ಸರ್ಕಾರದ ಮಾರ್ಗಸೂಚಿಗಳನ್ನು ಸಡಿಲಿಸಿ ಎಲ್ಲಿಯೂ ಸಹ ಅವಕಾಶ ನೀಡಿಲ್ಲ ಸುಳ್ಳು ಸುದ್ದಿಗಳಿಗೆ ಊವಪೆÇವಗಳಿಗೆ ಕಿವಿ ಗೊಡದೆ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಅ ರೀತಿ ಆದೇಶ ಏನಾದರೂ ಬದಲಾವಣೆ ಇಲ್ಲಿಯೂ ಸಹ ಬದಲಾಗುತ್ತೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಕೊರಾನಾ ಮೂರನೇ ಅಲೆ ಬಾರದೇ ಆಗೇ ತಡೆಗಟ್ಟಲು ಸರ್ಕಾರ ಜನರ ಜೀವ ರಕ್ಷಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಆಚರಣೆಗಿಂತ ಜನರ ಜೀವ ಮುಖ್ಯ ಹಾಗಾಗಿ ಸರ್ಕಾರದ ನಿಯಮಗಳನ್ನು ಎಲ್ಲಾರೂ ಪಾಲನೆ ಮಾಡಬೇಕೆಂದು ತಿಳಿಸಿದರು.
ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೊರಾನಾ ಕಂಟಕದಿಂದ ಮಹನೀಯರು ಜಯಂತಿಗಳು ಬರೀ ಪೂಜೆಗೆ ಮಾತ್ರ ಸೀಮಿತವಾಗಿದ್ದು ಈ ಬಾರಿ ಕೊರಾನಾ ಕಡಿಮೆ ಆಗಿದೆ ಹಾಗಾಗಿ ಮೆರವಣಿಗೆ ಮೂಲಕ ಜಯಂತಿ ಆಚರಣೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳು ತಾಲೂಕಿನಲ್ಲಿ ಶಾಂತಿ ಸಾಮರಸ್ಯ ಸಹೋದರತ್ವ ಭಾವನೆಯೊಂದಿಗೆ ನಡೆದುಕೊಂಡು ಬಂದಿದ್ದೇವೆ ಸರ್ಕಾರದ ನಿರ್ಭಂಧಗಳನ್ನು ಸಡಿಲಿಸಿ ಜಯಂತಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ಅರಂವಿದ್ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಬಿ. ಮಂಜುನಾಥ್, ಉಪನ್ಯಾಸಕ ಕೊಟ್ರೇಶ್, ವಾಲ್ಮೀಕಿ, ಮುಸ್ಲಿಂ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪೆÇೀಲೀಸ್ ಕೂಲಹಳ್ಳಿ ಕೊಟ್ರೇಶ್ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
