ಈ ಬಾಲಕನ ಸಹಾಯಕ್ಕೆ ಬನ್ನಿ- 4 ವರ್ಷಗಳಿಂದ ಮಾಶಾಸನವಿಲ್ಲದೆ ಪರದಾಟ

ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು/ಗುಡಿಬಂಡೆ : ಯಶ್ವಂತ್ ಎಂಬ 14 ವರ್ಷದ ಚಿಕ್ಕ ಬಾಲಕ ದೈಹಿಕವಾಗಿ ಮತ್ತು ಮಾನಸಿಕವಾಗಿ 10 ಬಹು ಅಂಗವೈಕಲ್ಯದಿಂದ ಬಳಲುತ್ತಿದ್ದಾನೆ, ಅತ್ತ ತಂದೆ, ತಾಯಿ ಇಬ್ಬರನ್ನು ಕಳೆದುಕೊಂಡು ದೇವರ ವಿಧಿಯಾಟದಲ್ಲಿ ಸಿಲುಕಿಕೊಂಡಿದ್ದಾನೆ. ಮಗುವಿನ ಎಲ್ಲಾ ಜವಾಬ್ದಾರಿಯನ್ನು ಚಿಕ್ಕಮ್ಮ ನೋಡಿಕೊಳ್ಳುತ್ತಿದ್ದರೂ ಮನೆಯಲ್ಲಿ ಪುರುಷ ಸದಸ್ಯರಿಲ್ಲದೆ ಜೀವನ ಸಾಗಿಸಲು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ.

ರಾಜ್ಯ ರಾಜಧಾನಿಯಿಂದ ಕೇವಲ 100 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಎಂಬ ಸಣ್ಣ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಯಶ್ವಂತ್ ಎಂಬ 14 ವರ್ಷದ ಅಂಗವೈಕಲ್ಯ ಬಾಲಕ ಕೆಲವೇ ವರ್ಷಗಳಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ, ಅವನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ, ಇಂತಹ ಸಂದರ್ಭದಲ್ಲಿ ಬಾಲಕನ ಚಿಕ್ಕಮ್ಮನಾದ ಚೆನ್ನಮ್ಮ ಯಶ್ವಂತ್‍ನನ್ನು ನೋಡಿಕೊಳ್ಳಲು ತನ್ನ ಜೀವನವನ್ನೇ ಮುಡುಪಾಗಿಟ್ಟು ಆಸರೆಯಾಗಿದ್ದಾಳೆ, ಇವರನ್ನು ನೋಡಿಕೊಳ್ಳಲು ಮನೆಯಲ್ಲಿ ಪುರುಷ ಸದಸ್ಯರು ಯಾರು ಇಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ನಿಸ್ಸಹಾಯ ಸ್ಥಿತಿಯಲ್ಲಿ ಸಹಾಯಕ್ಕಾಗಿ ಎದುರು ನೋಡುತ್ತಾ ಜೀವನ ನಡೆಸುತ್ತಿದ್ದಾರೆ.

4 ವರ್ಷಗಳಿಂದ ಪಿಂಚಣಿಯೇ ಇಲ್ಲ : ಯಶ್ವಂತ ಮತ್ತು ಆತನ ತಂದೆಯ ಇಬ್ಬರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ಮಾಡಿಸಿ ಅಂಗವೈಕಲ್ಯದ ಪಿಂಚಣಿ ಬರುವಂತೆ ಮಾಡಿಕೊಂಡಿದ್ದರು, ಕಾರಣ ಆ ಮಗುವಿನ ಆಧಾರ್ ಕಾರ್ಡ್ ಸೇರಿದಂತೆ ತಂಬ್ ಇರಲಿಲ್ಲ, ಈಗ ಯಶ್ವಂತ್‍ನ ತಂದೆ ಮೃತರಾಗಿ 4 ವರ್ಷ ಕಳೆದರೂ ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಗುವಿನ ಚಿಕ್ಕಮ್ಮನಾದ ಚೆನ್ನಮ್ಮ ದೂರಿದ್ದಾರೆ, ಹಾಗೂ 4 ವರ್ಷಗಳಿಂದ ಪಿಂಚಣಿ ಇಲ್ಲದೆ ಮಗುವಿನ ಪೋಷಣೆ ತುಂಬ ಕಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡು ಯಾರಾದರು ಸಹಾಯ ಮಾಡುತ್ತಾರೇನೊ ಎಂದು ಕಾಯುತ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ಸಹಾಯಕ್ಕಾಗಿ ನಿರೀಕ್ಷೆ : ಯಶ್ವಂತ್ ಸಂಪೂರ್ಣ ಅಂಗವೈಕಲ್ಯವನ್ನು ಹೊಂದಿದ್ದು, ಎದ್ದು ನಿಲ್ಲಲು, ಮಾತನಾಡಲು, ಗ್ರಹಿಸಲು ಸೇರಿದಂತೆ 10 ಬಹು ಅಂಗವೈಕಲ್ಯವನ್ನು ಹೊಂದಿದ್ದಾನೆ ಇನ್ನ ಸರಕಾರದಿಂದ ಬರಬೇಕಾಗಿದ್ದ ಅಂಗವೈಕಲ್ಯ ಪಿಂಚಣಿ 4 ವರ್ಷಗಳಿಂದ ಬರುತ್ತಿಲ್ಲ, ಹೀಗಿರುವಾಗ ಮನೆಯಲ್ಲಿ ವಯಸ್ಸಾಗಿರುವ ಅಜ್ಜಿ, ಚೆನ್ನಮ್ಮ ಹಾಗೂ ಮಗು ಯಶ್ವಂತ್ ಇದ್ದಾರೆ, ಅಜ್ಜಿ ಮೇಕೆ ನೋಡಿಕೊಂಡರೆ, ಮಗುವಿನ ಚಿಕ್ಕಮ್ಮ ಯಶ್ವಂತ್ ನೋಡಿಕೊಳ್ಳುವುದಕ್ಕಷ್ಟೇ ಸಮಯ ಮೀಸಲಿಟಿದ್ದಾರೆ ಹೀಗಿರುವಾಗ ಕೂಲಿ ಮಾಡಲು ಅಥವಾ ಕೆಲಸಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ ಎಂದು ಅಳಲನ್ನು ತೊಡಿಕೊಂಡರು.

ಯಶ್ವಂತ್ ಕುಟುಂಬಕ್ಕಾಗಿ ಅಭಿಯಾನ : ಬೆಂಗಳೂರಿನ ಸುರೇಶ್ ಎಂಬವರು ಯಶ್ವಂತ್ ಕುಟುಂಬಕ್ಕೆ ಆರ್ಥಿಕವಾಗಿ ಅನುಕೂಲವಾಗುವ ಮೇಕೆ, ಕುರಿಯನ್ನು ಕೊಡಿಸಲು ಅಭಿಯಾನ ಮಾಡುತ್ತಿದ್ದಾರೆ, ಇದರಿಂದ ಅವರು ವಾರಕೊಮ್ಮ, ತಿಂಗಳಿಗೊಮ್ಮ ಹಣವನ್ನು ಸಂಪಾದಿಸಿಕೋಂಡು ಅವರ ಜೀವನ ನಡೆಸಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದೇವೆ ಎಂದರು, ಇನ್ನ ಹಣ ಅಥವಾ ರೇಷನ್ ಕೊಡಿಸದರು ಅದು ತಾತ್ಕಾಲಿಕವಾಗಿ ಅವರಿಗೆ ನೆಮ್ಮದಿಕೊಟ್ಟರು ನಂತರ ಅದೇ ಕಷ್ಟ ಪಡಬೇಕಾಗುತ್ತದೆ ಹಾಗಾಗಿ ಅವರ ಕೋರಿಕೆಯ ಮೆರೆಗೆ ಈ ನಿರ್ಧಾರ ಮಾಡುತ್ತಿದ್ದೇವೆ ಎಂದರು.

ಸರಕಾರದ ಅಧಿಕಾರಿಗಳು ಈ ರೀತಿಯ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಅವರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು, ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಬೇಕು, ಜಿಲ್ಲೆ, ರಾಜ್ಯದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿದ್ದು ಅನೇಕ ವೃದ್ಧರು, ಅಂಗವೈಕಲ್ಯವನ್ನು ಹೋಂದಿರುವವರು ಆಧಾರ್, ತಂಬ್ ಕೆಲಸ ಮಾಡದೇ ಪ್ರತೀ ದಿನ ಕಚೇರಿಗಳಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ, ಇವರಿಗೆ ಪರಿಹಾರ ಹೇಗೆ?, ಅವರ ಜೀವನದ ಪರಿಸ್ಥಿತಿ ಹೇಗೆ ಎಂಬ ಹಲವು ಪ್ರಶ್ನೆಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸರಕಾರದ ಮುಂದಿದೆ, ಇದಕ್ಕೆ ಶೀಘ್ರ ಹರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ಅಧಿಕಾರಿಗಳ ತಂಡ ನೇಮಿಸಿ ತಾಲೂಕುವಾರು ಮಾಹಿತಿ ಪಡೆದರೆ ಉತ್ತಮ.

ನವೀನ್ ರಾಜ್ ಕನ್ನಡಿಗ, ಜಿಲ್ಲಾ ಯುವಾಧ್ಯಕ್ಷ ಜಯಕರ್ನಾಟಕ.

ಗುಡಿಬಂಡೆ ತಾಲೂಕಿನ ಯಶ್ವಂತ್ ಎಂಬ ಮಗುವಿನ ಪರಿಸ್ಥಿತಿ ಹೇಳತೀರದ್ದು, ಬಹು ಅಂಗವೈಕಲ್ಯತೆಯನ್ನು ಹೊಂದಿದ್ದಾನೆ, ತಂದೆ, ತಾಯಿ ಇಲ್ಲದ ಮಗುವಿನ  ಚಿಕ್ಕಮ್ಮ ಚೆನಮ್ಮ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ, ತಾಂತ್ರಿಕ ದೋಷದಿಂದ ನಾಲ್ಕು ವರ್ಷಗಳಿಂದ ಮಗುವಿಗೆ ಪಿಂಚಣಿ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ, ನಾವು ನಮ್ಮ ಸ್ನೇಹಿತರು ಈ ಹಳ್ಳಿಗೆ ಬೇಟಿ ಮಾಡಿ ಖದ್ದು ಪರಿಸ್ಥಿತಿ ನೋಡಿದ್ದೇವೆ, ಅವರು ಎರಡು ಮೇಕೆಗಳನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಹಾಗಾಗಿ ಅವರ ಸಹಾಯಕ್ಕಾಗಿ ಅಭಿಯಾನ ಮಾಡುತ್ತಿದ್ದೇವೆ.

ಸುರೇಶ್, ಅಧ್ಯಕ್ಷರು, ಪರಮಹಂಸ ಎಜುಕೇಷನ್ ಟ್ರಸ್ಟ್ ಹಾಗೂ ಕಾರ್ಯದರ್ಶಿ, ಉನ್ನತಿ ಮಾನಹಕ್ಕಳ ರಕ್ಷಣಾ ಸಂಘ ಬೆಂಗಳೂರು.

Recent Articles

spot_img

Related Stories

Share via
Copy link
Powered by Social Snap