ಎಸ್ಪಿ ಸೆಡ್ಡು ಹೊಡೆಯುವ ಭಂಗಿ ಅಸಹ್ಯಕರ, ದರ್ಪದ ಅವತಾರ: ರವಿಕುಮಾರ

ಬೆಳಗಾವಿ:

    ಕಿತ್ತೂರಿನಲ್ಲಿ ನಡೆದಿದ್ದ ರೈತರ ಹೋರಾಟ ಮತ್ತು ಹೆದ್ದಾರಿ ತಡೆ ಸಂದರ್ಭ ಬೆಳಗಾವಿ ಜಿಲ್ಲಾ ಎಸ್ಪಿ ಅವರ ಸೆಡ್ಡು ಹೊಡೆಯುವ ದೃಶ್ಯಕ್ಕೆ ಬಿಜೆಪಿ ಕೆರಳಿದೆ.

    ತಾಳ್ಮೆ ವ್ಯವದಾನ ವಹಿಸಬೇಕಿದ್ದ ಐಪಿಎಸ್ ಅಧಿಕಾರಿಯ ಸೆಡ್ಡು ಹೊಡೆಯುವ ಭಂಗಿ ಹುಂಬುತನದ ಪರಮಾವಧಿ ಎಂದು ವಿಪ ಸದಸ್ಯ ಎನ್. ರವಿಕುಮಾರ ಆಕ್ರೋಶ ವ್ಯಕ್ತಪಡಿಸಿದರು.ರೈತರ ವಿರುದ್ಧ ತೊಡೆ ತಟ್ಟಿರುವ ಅವರ ಆಕ್ಷೇಪಾರ್ಹ ದೇಹ ಭಂಗಿಯ ಬಗ್ಗೆ ಸದನದ ಧ್ವನಿ ಎತ್ತಲಾಗುವುದು ಎಂದು ಬಿಜೆಪಿ ಎನ್.ರವಿಕುಮಾರ ಇಂದು ಬೆಳಿಗ್ಗೆ ತಿಳಿಸಿದರು.

    ಬೆಳಗಾವಿ ಜಿಲ್ಲೆಯ ಚನ್ನಮ್ಮ ಕಿತ್ತೂರು ತಾಲೂಕಿನಲ್ಲಿ ರೈತರು ಪ್ರತಿಭಟನೆ ನಡೆಸಿದ ವೇಳೆ ಬೆಳಗಾವಿ ಜಿಲ್ಲಾ ಎಸ್ಪಿ ತೋರಿದ ವರ್ತನೆ ಅಸಹ್ಯಕರ ಮತ್ತು ದರ್ಪದ ನಡೆಯಾಗಿದೆ ಎಂದರು.ರಾಜ್ಯ ಸರಕಾರದ ಹಲವು ವೈಫಲ್ಯವನ್ನು ಖಂಡಿಸಿ ಡಿ.13 ರಂದು ನಗರದ ಯಡಿಯೂರಪ್ಪ ಮಾರ್ಗದಲ್ಲಿ ಸರಕಾರದ ವಿರುದ್ಧ ಬೃಹತ್ ಸಮಾವೇಶ ನಡೆಸಲಾಗುವುದು.

    ಸರಕಾರಕ್ಕೆ ಬಾರು ಕೋಲಿನ ಏಟು ನೀಡಲಾಗುವುದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಜನರು ಭಾಗವಹಿಸಲಿದ್ದಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap