ಚಳ್ಳಕೆರೆ
ಶ್ರೀಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಇಲ್ಲಿನ ಎಸ್‍ಆರ್‍ಎಸ್ ವಿದ್ಯಾಸಂಸ್ಥೆ ಪೂರ್ವ ಪ್ರಾಥಮಿಕ ಶಾಲಾ ವಿಭಾಗದ ಪುಟ್ಟ ಮಕ್ಕಳಿಂದ ಶ್ರೀಕೃಷ್ಣನ ವಿವಿಧ ವೇಷಗಳನ್ನು ಧರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರಾಚಾರ್ಯ ಬಿ.ಎಸ್.ವಿಜಯ್ ಮಕ್ಕಳ ಶ್ರೀಕೃಷ್ಣನ ವಿವಿಧ ವೇಷಭೂಷಣಗಳಲ್ಲಿ ಮಕ್ಕಳ ಕಂಗೊಳಿಸುತ್ತಿದ್ದನ್ನು ಪ್ರಸ್ತಾಪಿಸಿ ಭಗವಾನ್ ಶ್ರೀಕೃಷ್ಣ ಬಾಲ್ಯದಲ್ಲೇ ತನ್ನ ಅಮೋಘವಾದ ಲೀಲೆಗಳಿಂದ ಜನರನ್ನು ಚಕಿತಗೊಳಿಸುತ್ತಿದ್ದನ್ನು. ಶ್ರೀಕೃಷ್ಣನ ಅವತಾರದ ಬಗ್ಗೆ ಹಲವಾರು ದಂತಕಥೆಗಳು ಇಂದಿಗೂ ನಮ್ಮಲ್ಲಿವೆ. ಆದರೆ, ಇಂದು ನಮ್ಮ ಶಾಲೆಯ ಮಕ್ಕಳು ವಿವಿಧ ವೇಷಗಳಲ್ಲಿ ಕೃಷ್ಣನ ಲೀಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೀರಿ, ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಶಾಲೆಯ ಶಿಕ್ಷಕಿಯರಾದ ವಾಣಿ, ಲಾವಣ್ಯ, ಸುಜಾತ ಮುಂತಾದವರು ಶಾಲೆಯ ಮಕ್ಕಳಿಗೆ ಶ್ರೀಕೃಷ್ಣ ವೇಷಗಳ ಧರಿಸುವ ಬಗ್ಗೆ ಮತ್ತು ಅವುಗಳು ಉತ್ತಮವಾಗಿ ರೂಪುಗೊಳ್ಳುವ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಮಕ್ಕಳು ಶ್ರೀಕೃಷ್ಣನ ವೇಷದಲ್ಲಿ ಕಂಗೊಳಿಸುತ್ತಿದ್ದು, ಎಲ್ಲರೂ ಈ ಮಕ್ಕಳ ವೇಷಭೂಷಣಗಳನ್ನು ಕಂಡು ಸಂತಸ ವ್ಯಕ್ತ ಪಡಿಸಿದರು.