ಕಂದನ ಬಯಕೆ

0
40
 
ಕನ್ನಡಾಂಬೆಯ ಮಕ್ಕಳೆ ಬನ್ನಿ
ಪರಿಸರ ಸುತ್ತೋಣ
ಕನ್ನಡ ನಾಡಿನ ಸೌಂದರ್ಯವ
ಹರುಷದಿ ಸವಿಯೋಣ
ತೆಂಗಿನ ತೋಟಕೆ ಹೋಗಿ
ಎಳನೀರ ಕುಡಿಯೋಣ
ಮಾವಿನ ತೋಟದಿ ಮಾವಿನ ಹಣ್ಣಿನ
ರುಚಿಯ ಸವಿಯೋಣ
ಬಣ್ಣದ ಚಿಟ್ಟೆಗಳಂದವ ನೋಡಿ
ಹಿರಿ ಹಿರಿ ಹಿಗ್ಗೋಣ
ಛಂಗನೆ ಜಿಗಿಯುವ ಜಿಂಕೆಯ ನೋಡಿ
ಕುಣಿಕುಣಿದಾಡೋಣ
ವಿಧವಿಧ ರಂಗಿನ ಕಾಗದದಿ
ದೋಣಿಗಳ ಮಾಡೋಣ
ಜುಳು ಜುಳು ಹರಿವ ಹೊಳೆಗಳಲಿ
ದೋಣಿಗಳ ನಡೆಸೋಣ
ಘಮಘಮವೆನ್ನುವ ಹೂಗಳ ತೆರದಿ
ಹರುಷದಿ ಅರಳೋಣ
ಮುಗಿಲ ಮುಟ್ಟಿದ ಗಿರಿಗಳೆತ್ತರಕೆ
ಕನ್ನಡವ ಬೆಳೆಸೋಣ
ವಿಧವಿಧ ಜಾತಿ ಧರ್ಮಕೆ ಸೇರಿದ
ಗಳೆಯರ ಸೇರೋಣ
ಎಲ್ಲಾ ಗೆಳೆಯರು ಮನುಜರೆ ಎಂಬ
ಭಾವದಿ ಬದುಕೋಣ
-ವೈ.ಎಸ್.ಹನುಮಂತಯ್ಯ. ಎಡೆಯೂರು
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here