ಕದಂಬ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರ ಆಯ್ಕೆ

ಹರಪನಹಳ್ಳಿ:

         ಕರುನಾಡ ಕದಂಬ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾಗಿ ಮಂಡಕ್ಕಿ ಸುರೇಶ್‍ರವರು ಹಾಗೂ ಗೌರವ ಅಧ್ಯಕ್ಷರಾಗಿ ಎನ್.ರವಿಯವರನ್ನು ಆಯ್ಕೆ ಮಾಡಿರುವುದಾಗಿ ವೇದಿಕೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸುಧಾಕರ ತಿಳಿಸಿದರು.

         ಪಟ್ಟಣದ ಪ್ರವಾಸಿಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ನಾಡು, ನುಡಿ, ಸಂಸ್ಕøತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕರುನಾಡು ಕದಂಬ ರಕ್ಷಣಾ ವೇದಿಕೆ ತಾಲ್ಲೂಕು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

         ತಾಲೂಕು ಗೌರವಧ್ಯಕ್ಷರಾಗಿ ಬಸವರಾಜ ಕವಸರ್, ಉಪಾದ್ಯಕ್ಷರಾಗಿ ನಿಂಗರಾಜ ಚನ್ನಾಳ್, ಸಂಘಟನಾ ಅಧ್ಯಕ್ಷ ಕೋರಿಶೆಟ್ಟಿ ತಿರುಮಲ, ಪ್ರಧಾನ ಕಾರ್ಯದರ್ಶಿ ಪಿ.ಕರಿಬಸಪ್ಪ, ಸಹ ಕಾರ್ಯದರ್ಶಿ ಪ್ರಶಾಂತ, ಮಲ್ಲಿಕಾರ್ಜುನ ವಿ., ಸಂಘಟನಾ ಕಾರ್ಯದರ್ಶಿ ಎಚ್.ಪರಶುರಾಮ, ಮದ್ದಾನಪ್ಪ ಪೂಜಾರ, ಗೌರವ ಸಲಹೆಗಾರರಾಗಿ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಬಿ.ಮಾಧವರಾವ್, ಸೇರಿದಂತೆ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

         ಪ್ರಥಮ ಕಾರ್ಯಕ್ರಮವಾಗಿ ವೇದಿಕೆಯಿಂದ ಪೆ.1ರಂದು ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಆಸಕ್ತರು ವೇದಿಕೆ ಅಧ್ಯಕ್ಷರು, ಕಾರ್ಯದರ್ಶಿಗಳ ದೂರವಾಣಿ ಮೂಲಕ ಅಥವಾ ನೇರವಾಗಿ ಸೂಕ್ತ ದಾಖಲೆಗಳೊಂದಿಗೆ ಸಂಪರ್ಕಿಸಬೇಕೆಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಎಸ್.ಪೇಟೆಮಠ, ಉಪಸ್ಥಿತರಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link