ಬೆಂಗಳೂರು:
ದೇಶದ ಮತ್ಸ್ಯೋದ್ಯಮ ಅಭಿವೃದ್ಧಿಗೆ ಪೂರಕ ಎಂದು ಭಾವಿಸಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ .ಆದರೆ ಪ್ರದೇಶಾಧಾರಿತ ಯೋಜನೆ ಅಥವಾ ಸೂಕ್ತ ಸಲಕರಣೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ .ಇದಕ್ಕೆ ತಾಜಾ ಉದಾಹರಣೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆಯಡಿ ಆಳ ಸಮುದ್ರ ಮೀನುಗಾರಿಕಾ ಬೋಟ್‌ಗಳನ್ನು ನೀಡಲು ಮುಂದಾಗಿವೆ ನೀಡುತ್ತಿರುವುದೇನೋ ಒಳ್ಳೆಯದೆ . ಆದರೆ ಸರ್ಕಾರದಿಂದ ನೀಡುತ್ತಿರುವ ಬೋಟ್‌ಗಳು ರಾಜ್ಯ ಕರಾವಳಿಯಲ್ಲಿ ಬಳಕೆಗೆ ಬರುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದೇ ಕಾರಣದಿಂದಲೇ ಸರ್ಕಾರ ಎಷ್ಟೆ ಭಾರಿ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿದ್ದರೂ ಸಹ ಬೋಟ್‌ಗಳನ್ನು ಪಡೆಯಲು ಯಾರೊಬ್ಬರು ಮುಂದೆ ಬರುತ್ತಿಲ್ಲ.
ಮತ್ಸ್ಯಸಂಪದ ಯೋಜನೆಯಡಿ ಸರ್ಕಾರಗಳು ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಲಾಂಗ್ ಲೈನರ್ ಬೋಟ್‌ಗಳನ್ನು ಮೀನುಗಾರರಿಗೆ ನೀಡಲು ಮುಂದಾಗಿದೆ ಆದರೆ ಇಲ್ಲಿರುವ ಒಂದು ಸಮಸ್ಯೆ ಎಂದರೆ ಅದರ ಗಾತ್ರ ಏಕೆಂದರೆ ಸಾಮಾನ್ಯವಾಅಗಿ ಕರ್ನಾಟಕದ ಕರಾವಳಿಯಲ್ಲಿ ಮದ್ಯಮ ಹಾಗು ಸಣ್ಣ ಗಾತ್ರದ ಬೋಟ್ ಗಳನ್ನು ಬಳಸುತ್ತಾರೆ ಆದ್ದರಿಂದ ನಮಗೆ ನಿಮ್ಮ ಲಾಂಗ್ ಲೈನರ್ ಬೇಡ ಎಂದು ಮೀನುಗಾರ ಲಾಂಗ್ ಲೈನರ್ ಕಡೆ ತಿರುಗಿ ಸಹ ನೋಡದಿರುವುದು ಸರ್ಕಾರದ ನಿದ್ದೆ ಕೆಡಿಸಿದೆ.
ಇನ್ನು ಸರ್ಕಾರ ಹೇಳುವುದೇನೆಂದರೆ ಹೆಸರೆ ಹೇಳುವಂತೆ ಲಾಂಗ್ ಲೈನರ್ ಅಂದರೆ ದೊಡ್ಡ ಬೋಟ್ ಆಗಿರುವಾಗ ನೂರಾರು ಮೈಲು ದೂರ ತೆರಳಿ ಆಳಸಮುದ್ರ ಮೀನುಗಾರಿಕೆ ನಡೆಸುವುದರಿಂದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲು ಸಾಧ್ಯವಿದ್ದು, ಇದರಿಂದ ಮೀನುಗಾರರು ಹೆಚ್ಚಿನ ಲಾಭ ಗಳಿಸಬಹುದು ಎಂದು ಸರ್ಕಾರ ಹೇಳಿದೆ.
ಯೋಜನೆಯ ಪ್ರಯೋಜನ ಪಡೆಯಬೇಕಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರರೇ ವಿರೋಧ ಮಾಡುತ್ತಿದ್ದಾರೆ. ಲಾಂಗ್ ಲೈನರ್ ಬೋಟ್‌ಗಳ ಗಾತ್ರ ದೊಡ್ಡದಿದ್ದು, ಅದು ಕೇರಳ, ತಮಿಳುನಾಡಿನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಯೋಗ್ಯವಾಗಿದೆ. ಆದರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಪರ್ಶಿಯನ್ ಅಥವಾ ಟ್ರಾಲ್ ಬೋಟ್‌ನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಸಾಧ್ಯವಿದೆ. ಇದರಿಂದ ಕೊಟ್ಯಂತರ ರೂಪಾಯಿ ಮೌಲ್ಯದ ಬೋಟ್‌ಗಳಿಗೆ ನಾಲ್ಕೈದು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.