ಬೆಟ್ಟ ಗುಡ್ಡದ ಮಣ್ಣಲ್ಲಿ ಬೆವರು ಸುರಿಸಿ
ಬದುಕು ಕಟ್ಟಿಕೊಟ್ಟವಳು
ಪತಿಗೆ ಬೆನ್ನೆಲುಬಾಗಿ ನಿಂತು, ಬಾಳು ಬೆಳಗಿದವಳು.
ಮುಗುಳ್ನಗೆಯ ಹೊತ್ತು, ಮೇಲೇರಿದವಳು
ತನು ಮನವ ತಣಿಸುತ್ತ ಎಲ್ಲರೊಳಗೊಂದಾಗಿ
ಮನೆಯಲ್ಲಿ ಚಿಕ್ಕವಳು.
ಅನ್ನದಾನವ ಮಾಡಿ, ಅನವರತ ಸಲಹಿದವಳು
ಮನವ ಮಂದಿರ ಮಾಡಿ
ಕ್ಲೇಶ ಕಳೆದವಳು.
ಮುದ್ದುಮುದ್ದಾಗಿ ಬಂದು ತನ್ನೊಳಗೆ ನಿಟ್ಟಿಸಿದವಳು
ಪರರ ನಿಂದಿಸದೆ
ಪರಿಸರ ಪ್ರೀತಿಯಾದವಳು.
ಹಿರಿಕಿರಿಯರೋಲೈಸಿ ನೆರೆ ನೆಚ್ಚಿದಾಂಗೆ ನಡೆದವಳು
ತುಂಬು ತಾಳ್ಮೆಯ ಹರಡಿ
ಎಲ್ಲರೊಳು ಮಾನ್ಯತೆ ಪಡೆದವಳು.
ತಿದ್ದಿ ತಿಲಕವ, ನೆನೆದವರ ಹೃದಯವಾದವಳು
ಬೆಳ್ಳಿ ಮೋಡಕೆ ಹಾರಿ
ದೇವ, ನಿನ್ನೊಳಗೈಕ್ಯವಾದವಳು.
– ಡಿ. ನಾರಾಯಣ,
ಸೀಗೇಹಳ್ಳಿ.
