ಕಿರುತೆರೆ ನಟನಿಗೆ 18.50 ಲಕ್ಷ ವಂಚಿಸಿದ ಕಂಪನಿ…!

ಬೆಂಗಳೂರು; 
 
     ಝೀ ಕನ್ನಡದ ರಿಯಾಲಿಟಿ ಷೋಗಳಿಂದ  ಜನಪ್ರಿಯರಾದ ಮಾಸ್ಟರ್ ಆನಂದ್  ಇದೀಗ ಮಾಸ್ಟರ್ ಆನಂದ ಬೇರೆ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ನಟನಿಗೆ ವಂಚಕರು ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ.
    ಮಾಸ್ಟರ್ ಆನಂದ್ ನಿವೇಶನ  ಖರೀದಿಸಲು ಹಣ ಹೂಡಿಕೆ ಮಾಡಿದ್ರು. ಆದ್ರೆ ಖರ್ತನಾಕ್ ಸಂಸ್ಥೆಯೊಂದು ಆನಂದ್​ಗೆ ಮೋಸ ಮಾಡಿದೆ ಎನ್ನುವ ಆರೋಪ  ಕೇಳಿ ಬಂದಿದ್ದು. ನಟ ಆನಂದ್​ ವಂಚಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

     ಮೋಸ ಮಾಡುವವರಿಗೆ ನಟ-ನಟಿಯರಾದ್ರೇನು ಸಾಮಾನ್ಯ ಜನರದಾರದ್ರೇನು. ವಂಚಕರು ನಾನಾ ರೀತಿಯಲ್ಲಿ ಬಲೆ ಬೀಸಿ ಖೆಡ್ಡಕ್ಕೆ ಬೀಳಿಸುವಲ್ಲಿ ನಿಪುಣರಾಗಿರುತ್ತಾರೆ. ನಿವೇಶನ ನೀಡೋದಾಗಿ ಮಾಸ್ಟರ್ ಆನಂದ್​ಗೆ 18.50 ಲಕ್ಷ ವಂಚನೆ ಮಾಡಿದ್ದಾರೆ. 2020ರ ಸೆಪ್ಟಂಬರ್ ನಿಂದ 2021ರ ಅಕ್ಟೋಬರ್​ ಆವಧಿಯಲ್ಲಿ ಈ ಘಟನೆ ನಡೆದಿದ್ದು, ಆನಂದ್​ ವಂಚನೆಗೆ ಒಳಗಾಗಿದ್ದಾರೆ. ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ವಿರುದ್ದ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ. ರಾಮ ಸಂದ್ರದಲ್ಲಿ ನಿವೇಶನ ಖರೀದಿಗೆ ಮುಂದಾದ ಆನಂದ್​

     ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ಖರೀದಿಸಲು ಮಾಸ್ಟರ್ ಆನಂದ್ ಮನೆ ಸಹ ನೋಡಿದ್ರು. ಒಮ್ಮೆ ಶೂಟಿಂಗ್​​ಗೆ ತೆರಳಿದ್ದ ವೇಳೆ ನಿವೇಶನ ಸಹ ನೋಡಿ ಬಂದಿದ್ರು. ನಿವೇಶನ ಇಷ್ಟವಾದ ಬಳಿಕ ಖರೀದಿಸಲು ಮುಂದಾಗಿದ್ದಾರೆ. ಮನಿಕಾ ಕೆಂ ಎಂಯಿಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ರು. ಆ ಬಳಿಕ ಮಲ್ಟಿ ಲೀಪ್ ವೆಂಚರ್ಸ್ ರಾಮಸಂದ್ರದ  ನಿವೇಶನ ತೋರಿಸಿದ್ದಾರೆ.

     70 ಲಕ್ಷಕ್ಕೆ ಖರೀದಿ ಒಪ್ಪಂದವಾಗಿ ಆನಂದ್​ ಹಂತ ಹಂತವಾಗಿ 18.5 ಲಕ್ಷ ಮುಂಗಡ ಹಣ ನೀಡಿದ್ದಾರೆ. ಕಂಪನಿ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಖರಾರು ಪತ್ರ ಮಾಡಿಕೊಟ್ಟಿತ್ತು. ಈ ನಡುವೆ ಅದೇ ನಿವೇಶನವನ್ನ ಬೇರೆಯವರಿಗೆ ಮಾರಾಟ ಮಾಡಿದೆ. ಈ ಬಗ್ಗೆ ಆನಂದ್​ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಮುಂಗಡ ಹಣ ಸಹ ವಾಪಸ್ ನೀಡಿಲ್ಲ. ಹೀಗಾಗಿ ಮಾಸ್ಟರ್ ಆನಂದ್ ಚಂದ್ರಲೇಔಟ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ದ ಎಫ್ ಐ ಆರ್ ಕೂಡ ದಾಖಲಾಗಿದೆ.

     ಮಾಸ್ಟರ್ ಆನಂದ್’ಆಗಿ ಖ್ಯಾತಿ ಪಡೆದಿರುವ ಹೆಚ್.ಆನಂದ್ ನಟ, ನಿರ್ದೇಶಕ ಹಾಗು ಹಾಸ್ಯ ನಟ ಆಗಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಹೆಸರು ಮಾಡಿದ್ದಾರೆ. 13 ಜುಲೈ 1985 ರಲ್ಲಿ ಜನಿಸಿದ ಮಾಸ್ಟರ್ ಆನಂದ್​, ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ರು. ನಟನೆ ಜೊತೆಗೆ ಕಿರುತೆರೆಯಲ್ಲಿ ಧಾರಾವಾಹಿಗಳನ್ನ ನಿರ್ದೇಶಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರು ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸಿಂಗ್ ಸ್ಟಾರ್-2’ ವಿಜೇತರು ಕೂಡ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 3 ಶೋನಲ್ಲಿ ಸ್ಪರ್ಧಿಸಿರುವ ಮಾಸ್ಟರ್ ಆನಂದ್ ವೀಕ್ಷಕರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು.

    ಮಾಸ್ಟರ್ ಆನಂದ್ ಅನೇಕ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಗೌರಿ ಗಣೇಶ, ಯುದ್ಧಕಾಂಡ, ಕಿಂದರಿ ಜೋಗಿ, ಮುತ್ತಿನಹಾರ, ಕರ್ಪೂರದ ಗೊಂಬೆ, ತಾಯಿ ಇಲ್ಲದ ತವರು, ಫ್ರೆಂಡ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅನೇಕ ಪ್ರಶಸ್ತಿಗಳು ತನ್ನದಾಗಿಸಿಕೊಂಡಿದ್ದಾರೆ. ಅತ್ತ್ಯುತ್ತಮ ಬಾಲನಟನಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ, ಹಾಗೂ ಫಿಲ್ಮ್​ ಫೇರ್​ ಪ್ರಶಸ್ತಿ ಕೂಡ ನಟನ ಪಾಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap