ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೇಸ್‍ನಿಂದ ಬೈಕ್ ರ್ಯಾಲಿ

ಕೊಟ್ಟೂರು:

      ಪೆಟ್ರೋಲ್, ಡೀಜಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರೋಧಿಸಿ ಕೊಟ್ಟೂರು ಕಾಂಗ್ರೇಸ ಕಾರ್ಯಕರ್ತರು ಹಾಗು ರೈತ ಸಂಘ ಸೇರಿದಂತೆ ವಿವಿಧ ಸಂಘಗಳು ಸೋಮವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.

      ಪಟ್ಟಣದ ಉಜ್ಜಿನಿ ಸರ್ಕಲ್‍ನಲ್ಲಿ ಆರಂಭವಾದ ಬೈಕ್ ರ್ಯಾಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ವಿರುದ್ದ ಕಾಂಗ್ರೇಸ್ ಕಾರ್ಯಕರ್ತರು ಘೋಷಣೆ ಕೂಗಿದರು.

      ನಂತರ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಭೆ ಸೇರಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಬಲವಾಗಿ ಕಾಂಗ್ರೇಸ್ ಕಾರ್ಯಕರ್ತರು ಖಂಡಿಸಿ ತಹಶೀಲ್ದಾರ ಕೆ. ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.

      ಶಾಲೆ ಕಾಲೇಜ್ ರಜೆ ಘೋಷಿಸಲಾಗಿತ್ತು. ಕೆಲ ಅಂಗಡಿಗಳು ತೆರೆದಿದ್ದು, ಇನ್ನೂ ಕೆಲವು ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದವು. ಬಸ್ ನಿಲ್ದಾಣದಲ್ಲಿ ಬಸ್‍ಗಳು ಸಂಚರಿಸದೆ ನಿಂತ್ತಿದ್ದರಿಂದ ಪ್ರಯಾಣಿಕರು ಪರದಾಡುವಂತ್ತಾಯಿತು.

      ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ, ಪಕ್ಷದ ಮುಖಂಡರಾದ ಹರ್ಷವರ್ಧನ, ದೊಡ್ಡರಾಮಣ್ಣ, ನೂರುಲ್ಲಾ ಖಾನ್, ಪ.ಪಂ. ಸದಸ್ಯ ತೋಟದ ರಾಮಣ್ಣ, ಜಗದೀಶ, ಸೇರಿದಂತೆ ಪ.ಪಂ. ಮಾಜಿ ಸದಸ್ಯರಾದ ಕರಡಿ ಕೊಟ್ರಯ್ಯ, ಬಿ.ಎಸ್. ವೀರೇಶ ಮುಂತಾದವರು ಇದ್ದರು.