ಕೊಟ್ಟುರಿನ ಪಿಯು ಕಾಲೇಜಿನ ನವ ರತ್ನಗಳು..!!

ಕೊಟ್ಟೂರು

       ಇಂದು ಪದವಿ ಪೂರ್ವ ಕಾಲೇಜಿಗೆ ಪಿ.ಯು.ಸಿ ದ್ವಿತೀಯ ಕಲಾವಿಭಾಗದಲ್ಲಿ ಮೊದಲ ರ್ಯಾಂಕ್(ಟಾಪರ್) ಸೇರಿ ಒಟ್ಟು 9 ವಿದ್ಯಾರ್ಥಿಗಳು ರ್ಯಾಂಕ್(ಟಾಪರ್)ಗಳಿಗೆ.

       ದ್ವಿತೀಯ ವರ್ಷದ ಪಿ.ಯು.ಸಿ ಫಲಿತಾಂಶದಲ್ಲಿ ಈ ಬಾರಿಯೂ ಕಲಾವಿಭಾಗದಲ್ಲಿ ಕೊಟ್ಟೂರಿನ ಇಂದು ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಒಂಬತ್ತು ಟಾಪರ್ಸ್(ರ್ಯಾಂಕ್)ನ್ನು ತಾವೇ ಬಾಚಿಕೊಳ್ಳುವ ಮೂಲಕ ಪಿ.ಯು.ಸಿ ಫಲಿತಾಂಶದ ಇತಿಹಾಸದಲ್ಲಿ ದೊಡ್ಡ ಸಾಧನೆ ಮಾಡಿ ಮೆರೆದಿದ್ದಾರೆ. ಈ ಮೂಲಕ ಇಂದು ಕಾಲೇಜ್ ರ್ಯಾಂಕ್ ಗಳಿಕೆಯ ಪಟ್ಟಿಯಲ್ಲಿ ಈ ಬಾರಿ ಅತಿ ಹೆಚ್ಚು ರ್ಯಾಂಕ್ ಪಡೆದ ಹೆಮ್ಮೆಗೆ ಪಾತ್ರವಾಗಿದೆ.

      ಮಹಾವಿದ್ಯಾಲಯದ ಕುಸುಮ ಉಜ್ಜಯಿನಿ 594 ಅಂಕಗಳೊಂದಿಗೆ ಮೊದಲ ರ್ಯಾಂಕ್‍ಗಳಿಸಿದ್ದರೆ. ಹೊಸಮನಿ ಚಂದ್ರಪ್ಪ ಬೇವೂರು 591 ಅಂಕಗಳೊಂದಿಗೆ ಎರಡನೇ ಟಾಪರ್ ಆಗಿದ್ದು ಇದೇ ತೆರನಾಗಿ ಎರಡನೇ ಟಾಪರ್ ಸ್ಥಾನಗಳನ್ನು ಮಹಾವಿದ್ಯಾಲಯಾದ ಇನ್ನಿತರ ವಿದ್ಯಾರ್ಥಿಗಳಾದ ನಾಗರಾಜ 591, ಓಮೇಶ್ 591 ಅಂಕಗಳೊಂದಿಗೆ ಎರಡನೇ ಟಾಪರ್ ಸ್ಥಾನವನ್ನು ಹಂಚಿಕೊಂಡಿದ್ದಾರೆ.

       ಮೂರನೇ ಟಾಪರ್ ಸ್ಥಾನವನ್ನು ಇದೇ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಚಿನ್ ಕೆ.ಜಿ 589, ಸುರೇಶ್.ಹೆಚ್ 589 ಅಂಕಗಳೊಂದಿಗೆ ಹೊರ ಹೊಮ್ಮಿದ್ದಾರೆ. ನಾಲ್ಕನೇ ಟಾಪರ್ ಸ್ಥಾನವನ್ನು ಹರಿಜನಸೊಪ್ಪಿನ ಉಚ್ಚೆಂಗಮ್ಮ 588 ಮತ್ತು ಕೋನಾಪುರಮಠದ ನಂದೀಶ್ 588 ಅಂಕಗಳನ್ನು ಪಡೆಯುವ ಮೂಲಕ ತಮ್ಮದಾಗಿಸಿಕೊಂಡಿದ್ದಾರೆ. 5ನೇ ಟಾಪರ್ ಆಗಿ ಅಂಗಡಿ ಸರಸ್ವತಿ 587 ಅಂಕಗಳನ್ನು ಪಡೆದು ಹೊರಹೊಮ್ಮಿದ್ದಾರೆ.

     ಇಂದು ಪದವಿ ಪೂರ್ವ ಮಹಾವಿದ್ಯಾಲಯ ಇಷ್ಟು ಪ್ರಮಾಣದಲ್ಲಿ ರ್ಯಾಂಕ್‍ಗಳನ್ನು ಗಳಿಸಿರುವುದು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆ ತಂದಿದೆ. ಈ ಬಗೆಯ ಫಲಿತಾಂಶಕ್ಕೆ ಎಲ್ಲಾ ಉಪನ್ಯಾಶಕರು ಮತ್ತು ಸಿಬ್ಬಂದಿಯವ ಟೀಂ ವರ್ಕ್ ಕೆಲಸ ಕಾರಣ. ರ್ಯಾಂಕ್ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವೆ – ಹೆಚ್.ಎನ್. ವೀರಭದ್ರಪ್ಪ ಪ್ರಾಚಾರ್ಯರರು ಇಂದು ಪದವಿ ಪೂರ್ವ ಕಾಲೇಜು ಕೊಟ್ಟೂರು.

     ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದೇ ತೆರನಾಗಿ ರ್ಯಾಂಕ್ ಪಡೆದು ಹೊರಹೊಮ್ಮತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರ್ಯಾಂಕ್ ಬರುವ ವಿದ್ಯಾರ್ಥಿಗಳನ್ನೇ ಪಟ್ಟಿಮಾಡಿಕೊಂಡು ತಯಾರು ಮಾಡಲಾಗುವುದಿಲ್ಲ ಬದಲಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನವಾಗಿ ವಿದ್ಯಾ ತರಬೇತಿ ನೀಡುತ್ತೇವೆ. ರ್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುವೆ – ಸಿ.ನಾಗರಾಜ ಪ್ರಾಧ್ಯಾಪಕರು ಇಂದು ಪದವಿ ಪೂರ್ವ ಕಾಲೇಜು ಕೊಟ್ಟೂರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link