ಕೊರಟಗೆರೆ : ರೈತರಿಗೆ ಕೇಬಲ್‌ ಕಳ್ಳತನದ ಭಯ

ಕೊರಟಗೆರೆ :

     ಪ್ರಸಕ್ತ ಬರಗಾಲದ ಸಂದರ್ಭದಲ್ಲಿ ರೈತಾಪಿ ವರ್ಗ ಮಳೆ -ಬೆಳೆ ಇಲ್ಲದೆ ಪರಿತಪಿಸಿ ಕೊಳವೆ ಬಾವಿಗಳ ಮೂಲಕ ಅಲ್ಪಸಲ್ಪ ಬೆಳೆಗಳನ್ನು ಉಳಿಸಿಕೊಳ್ಳುವಂತಹ ರೈತರಿಗೆ ಈಗ ಕೇಬಲ್ ಕಳ್ಳತನದ ಹಾವಳಿ ಹೆಚ್ಚಾಗಿ ರೈತರ ಪಂಪ್ ಸೆಟ್‌ಗಳಲ್ಲಿ ಸ್ಟಾರ್ಟರ್ ಹಾಗೂ ಕೇಬಲ್ ಕಳ್ಳತನದಿಂದ ಕೊರಟಗೆರೆ ತಾಲ್ಲೂಕಿನ ರೈತಪಿ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

     ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಯ ನೀಲಗೊಂಡನಹಳ್ಳಿ, ಎಲೆರಾಂಪುರ, ವಜ್ಜನಕುರಿಕೆ ಮತ್ತು ಕೋಳಾಲ ಗ್ರಾಪಂ ವ್ಯಾಪ್ತಿಯ ೧೦ಕ್ಕೂ ಅಧಿಕ ಗ್ರಾಮದ ವಾಟರ್ ಸಪ್ಲೈ  ಸೇರಿದ ಸ್ಥಳಗಳಲ್ಲಿ ಜೋತೆಗೆ ೨೫ಕ್ಕೂ ಅಧಿಕ ಕಡೆ ರೈತರ ಕೊಳವೆ ಬಾವಿಗಳ ಕೇಬಲ್ ಮತ್ತು ಮೇನ್ಸ್ ವೈರ್‌ಗಳು ಸರಣಿಯಾಗಿ ಕಳ್ಳತನ ನಡೆಯುವ ಮೂಲಕ ಪ್ರಸಕ್ತ ಬರಗಾಲದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರೈತ ಪ್ರವರ್ಗಕ್ಕೆ ದೊಡ್ಡ ಆಘಾತವಾದಂತಾಗಿದೆ. ಕಳ್ಳತನ ನಡೆದ್ರು ಪ್ರಕರಣ ದಾಖಲಿಸದೆ ಪೊಲೀಸರು ಗ್ರಾಪಂಯ ಸದಸ್ಯರ ಜೊತೆಗೂಡಿ ರೈತರನ್ನು ಸಮಾಧಾನ ಪಡಿಸುವುದೇ ಕಾಯಕವಾಗಿದೆ.

     ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸರಬರಾಜು ಆಗದೆ ವ್ಯತ್ಯಯಾಗುತ್ತಿದೆ ರೈತಾಪಿ ವರ್ಗ ಹಗಲುರಾತ್ರಿ ಎನ್ನದೇ ಬಿತ್ತನೆ ಮಾಡಿದ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದು, ಈ ಸಂದರ್ಭದಲ್ಲಿ ರಾತ್ರೋರಾತ್ರಿ ೨೫ಕ್ಕೂ ಅಧಿಕ ರೈತರ ಕೊಳವೆ ಬಾವಿಗಳ ಕೇಬಲ್ ಕಳ್ಳತನವಾಗಿರುವುದು ರೈತರುಗಳಿಗೆ ದೊಡ್ಡ ಆಘಾತವಾಗಿದ್ದು, ಈ ಭಾಗಗಳಲ್ಲಿ ಸತತವಾಗಿ ಕಳ್ಳತನ ನಡೆಯುತ್ತಿದ್ದರೂ ಇಲ್ಲಿನ ಪಿಎಸ್‌ಐ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಸದಸ್ಯರುಗಳ ಮುಖ್ಯನಾ ರಾಜಿ ಸಂಧಾನ ಮಾಡಿ ಕೈ ತೊಳೆದುಕೊಳ್ಳುತ್ತಿರುವುದು, ಕಳ್ಳತನ ಪ್ರಕ್ರಿಯೆ ವಿಚಾರವಾಗಿ ಫೋನ್ ಕರೆ ಮಾಡಿದ್ರೆ ಸ್ವಿಚ್ ಆಫ್ ಮಾಡಿಕೊಳ್ಳುವ ಪಿಎಸ್‌ಐ ಮನಸ್ಥಿತಿಯ ಬಗ್ಗೆ ಸಾರ್ವಜನಿಕವಾಗಿ ಬೇಸರವರ ಹಾಕುತ್ತಿದ್ದಾರೆ ಎನ್ನಲಾಗಿದೆ.

25ಕ್ಕೂ ಅಧಿಕ ಕಡೆ ಸರಣಿ ಕಳ್ಳತನ:

      ಕೆ.ಜಿ.ಬೇವಿನಹಳ್ಳಿಯ ರೈತ ಕೃಷ್ಣಮೂರ್ತಿ, ವೀರಣ್ಣ, ಗ್ರಾಪಂಗೆ ಸೇರಿದ ೩ಕೊಳವೆಬಾವಿ, ವಜ್ಜನಕುರಿಕೆಯ ರೈತ ರವಿಕುಮಾರ್, ರಾಮಣ್ಣಮೇಷ್ಟು, ಹನುಮಂತನಪಾಳ್ಯದ ರೈತ ವೀರಣ್ಣ, ದುಡ್ಡನಹಳ್ಳಿ ಗ್ರಾಮದ ಗ್ರಾಪಂಯ ಕೊಳವೆಬಾವಿ, ವಡ್ಡರಹಳ್ಳಿಯ ಕಮಲೇಶ್, ಸಂಕೇನಹಳ್ಳಿ ರೈತ ಶಿವಕುಮಾರ್, ಹೊನ್ನಗಂಗಯ್ಯ, ಗ್ರಾಪಂಯ 3 ಕೊಳವೆ ಬಾವಿಗಳಲ್ಲಿ ಕಳೆದ 15 ದಿನಗಳಿಂದ 25 ಕಡೆಗಳಲ್ಲಿ ಸರಣಿ ಕೇಬಲ್ ಕಳ್ಳತನ ನಡೆಯುತ್ತಲೆ ಇದ್ದರೂ ಕೋಳಾಲ ಪೊಲೀಸರ ಮೌನಕ್ಕೆ ಕಾರಣವೇನು ಎಂಬುದೇ ಯಕ್ಷಪ್ರಶ್ನೆ.

ಕರೆ ಸ್ವೀಕರಿಸದ ಕೋಳಾಲ ಪಿಎಸೈ :

     ಕೋಳಾಲ ವ್ಯಾಪ್ತಿಯ ರೈತಾಪಿವರ್ಗ ಅಥವಾ ಬಡಜನತೆ ತುರ್ತುವೇಳೆ ದೂರವಾಣಿ ಕರೆ ಮಾಡಿದರೂ ಕೋಳಾಲ ಪಿಎಸೈ ಕರೆ ಸ್ವೀಕರಿಸುತ್ತಿಲ್ಲ. ಮತ್ತೆ ಭಾನುವಾರ ಮತ್ತು ರಜೆ ದಿನಗಳಲ್ಲಿ ಸರಕಾರಿ ಮೊಬೈಲ್ ಸ್ವಿಚ್‌ಆಫ್ ಆಗಿರುತ್ತೆ. ಬೀಟ್ ಪೊಲೀಸರು ಬರ್ತಾರೇ ಪತ್ತೇ ಹಚ್ಚುತ್ತೀವಿ ಅಂತಾ ಹೇಳಿ ಹೋಗ್ತಾರೆ. ಕೇಬಲ್ ಕಳ್ಳತನದ ಮಾಹಿತಿ ಎಸ್‌ಪಿ ಮತ್ತು ಡಿವೈಎಸ್ಪಿಗೆ ತಿಳಿದರೇ ತನಿಖೆಯ ಒತ್ತಡ ಮತ್ತು ಭದ್ರತೆಯ ಮಾಹಿತಿ ಕೇಳ್ತಾರೇ ಎಂಬ ಭಯದಿಂದ ಪ್ರಕರಣವನ್ನೇ ಮುಚ್ಚಿಹಾಕುವ ಪ್ರಯತ್ನ ಸೋಗಸಾಗಿಯೇ ನಡೆಯುತ್ತಿದೆ ಎಂದು ರೈತರು ಆರೋಪ ಮಾಡಿದ್ದಾರೆ.

ತಡರಾತ್ರಿ ಬರ್ತಾರೆ ರೈತರೇ ಹುಷಾರ್ :

     ದಾಬಸ್ ಪೇಟೆ-ಕೊರಟಗೆರೆ ರಾಜ್ಯ ಹೆದ್ದಾರಿಯ ಸಮೀಪದ ಗ್ರಾಮಗಳಿಗೆ ಕತರ್ನಾಕ್ ಕೇಬಲ್ ಕಳ್ಳರ ತಂಡ ಹಗಲುವೇಳೆ ಆಗಮಿಸಿ ವಾಟರ್‌ಸಪೈ ಮತ್ತು ರೈತರ ಕೊಳವೆಬಾವಿ ಗುರುತಿಸುತ್ತಾರೇ. ತಡರಾತ್ರಿ ಅವುಗಳನ್ನೇ ಟಾರ್ಗೇಟ್ ಮಾಡಿ ಲಕ್ಷಾಂತರ ರೂ ಮೌಲ್ಯದ ಕೇಬಲ್ ಮತ್ತು ವೈರ್‌ಗಳನ್ನು ಕಳ್ಳತನ ಮಾಡ್ತಾರೇ. ವಾರಕ್ಕೊಮ್ಮೆ ಕಳ್ಳತನ ನಡೆಯುತ್ತಿದ್ರು ಕೋಳಾಲ ಪೊಲೀಸರ ತಂಡ ಕಳ್ಳರನ್ನ ಬಂಧಿಸದೇ ಇರುವುದೇ ಮತ್ತೇ ಕಳ್ಳತನ ಮಾಡಲು ಕಳ್ಳರಿಗೆ ಸಹಕಾರಿ ಆಗಿದೆ. ತುಮಕೂರು ಜಿಲ್ಲೆಯ ನೂತನ ಎಸ್ಪಿ ಮತ್ತು ಮಧುಗಿರಿ ಡಿವೈಎಸ್ಪಿ ವೆಂಕಟೇಶನಾಯ್ಡು ಕಳ್ಳತನವಾದ ಗ್ರಾಮಗಳಿಗೆ ಬೇಟಿನೀಡಿ ಕಳ್ಳರನ್ನ ಪತ್ತೇ ಹಚ್ಚಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap