ಬೆಂಗಳೂರು:
ಜೂನ್ 4ರ ಕ್ಯಾನ್ಸರ್ ಸರ್ವೈವರ್ಸ್ ಡೇ ಪ್ರಯುಕ್ತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಯಾವುದೇ ಕೈದಿಗಳಿಗೆ ಕ್ಯಾನ್ಸರ್ ಪತ್ತೆಯಾಗಿಲ್ಲ.
“ಕೈದಿಗಳನ್ನು ಸಾಮಾನ್ಯವಾಗಿ ಸರಿಯಾದ ನೈರ್ಮಲ್ಯ ಇಲ್ಲದ, ಮುಚ್ಚಿದ ಸ್ಥಳಗಳಲ್ಲಿ ಇರಿಸಲಾಗುತ್ತದೆ. ಕೈದಿಗಳ ಆರೋಗ್ಯ ಹಕ್ಕುಗಳು ಮತ್ತು ವೈಯಕ್ತಿಕ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಅವರನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ” ಎಂದು ಸಕ್ರಿಯಾ ಚಾರಿಟಬಲ್ ಟ್ರಸ್ಟ್‌ನ ಅನಿತಾ ರಾವ್ ಅವರು ಹೇಳಿದ್ದಾರೆ.
ಕಾರ್ಕಿನೋಸ್ ಹೆಲ್ತ್‌ಕೇರ್ ಸಕ್ರಿಯಾ ಚಾರಿಟೇಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಕ್ರೀನಿಂಗ್ ಕ್ಯಾಂಪ್ ವೇಳೆ ಯಾರಿಗೂ ಕ್ಯಾನ್ಸರ್ ಇರುವುದು ಪತ್ತೆಯಾಗಿಲ್ಲ. ಈ ಕ್ಯಾಂಪ್ ಇರುವವರನ್ನು ಅಥವಾ ಹೆಚ್ಚಿನ ಅಪಾಯದಲ್ಲಿರುವವರನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ರಾವ್ ವಿವರಿಸಿದ್ದಾರೆ.
