ಕ್ರಿಸ್ ಗೇಲ್’ರನ್ನು ಆರ್’ಸಿಬಿ ಉಳಿಸಿಕೊಳ್ಳೋದು ಪಕ್ಕಾ ಅನ್ಸತ್ತೆ ಯಾಕೆ ಗೊತ್ತಾ..?

0
27

ಐಪಿಎಲ್ ಹರಾಜು ಪ್ರಕ್ರಿಯೆಗೆ ಕೆಲ ತಿಂಗಳು ಬಾಕಿಯಿರುವಂತೆಯೇ ಕ್ರಿಸ್ ಗೇಲ್ ಭರ್ಜರಿ ಫಾರ್ಮ್’ಗೆ ಮರಳಿದ್ದಾರೆ.

ೆಸ್ಟ್’ಇಂಡಿಸ್ ದೈತ್ಯ ಕ್ರಿಕೆಟಿಗ ಕ್ರಿಸ್ ಗೇಲ್ ವಯಸ್ಸು 38 ದಾಟಿದರೂ ಇನ್ನೂ ಅವರ ತೋಳುಗಳಲ್ಲಿ ಬಲ ಕಡಿಮೆಯಾಗಿಲ್ಲ. ಅದಕ್ಕೆ ಸಾಕ್ಷಿಯೆಂಬಂತೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್’ನ ಫೈನಲ್ ಪಂದ್ಯದಲ್ಲಿ ಕೇವಲ 69 ಎಸೆತಗಳಲ್ಲಿ 146 ರನ್ ಬಾರಿಸಿದ್ದಾರೆ. ಅವರ ಬ್ಯಾಟಿಂಗ್’ನಿಂದ ಸಿಡಿದದ್ದು ಬರೋಬ್ಬರಿ 18 ಸಿಕ್ಸರ್’ಗಳು..! ಟಿ20 ಕ್ರಿಕೆಟ್’ನಲ್ಲಿ 18 ಸಿಕ್ಸರ್ ಸಿಡಿಸಿದ್ದೂ ಕೂಡಾ ವಿಶ್ವದಾಖಲೆ. ಅಲ್ಲದೇ ಟಿ20 ಕ್ರಿಕೆಟ್’ನಲ್ಲಿ 20 ಶತಕ ಹಾಗೂ 11 ಸಾವಿರ ರನ್ ಪೂರೈಸಿದ ಹೆಗ್ಗಳಿಕೆ ಗೇಲ್ ಪಾಲಾಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಕಳೆದ 2017ನೇ ಸಾಲಿನ ಐಪಿಎಲ್’ನಲ್ಲಿ ನೀರಸ ಪ್ರದರ್ಶನ ತೋರಿದ್ದರು. ಆಡಿದ 9 ಪಂದ್ಯಗಳಲ್ಲಿ 22.22ರ ಸರಾಸರಿಯಲ್ಲಿ ಕೇವಲ 200 ರನ್ ಕಲೆಹಾಕಿದ್ದರು. ಇದಾದ ಬಳಿಕ ಗೇಲ್ ಆರ್’ಸಿಬಿ ಕೈಬಿಡುವ ಸಾಧ್ಯತೆಗಳೇ ಹೆಚ್ಚು ಎಂದು ಕ್ರಿಕೆಟ್ ಅಭಿಮಾನಿಗಳು ಅಂದಾಜಿಸಿದ್ದರು.

ಆದರೆ ಬಾಂಗ್ಲಾ ಪ್ರೀಮಿಯರ್ ಲೀಗ್’ನಲ್ಲಿ ಭರ್ಜರಿ 2 ಶತಕ ಸಿಡಿಸುವ ಮೂಲಕ ತಮ್ಮಲ್ಲಿ ಇನ್ನೂ ಬ್ಯಾಟಿಂಗ್ ಸಾಮರ್ಥ್ಯ ಕುಂದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಗೇಲ್ ನೀಡಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್’ನಲ್ಲೂ ಗೇಲ್ ಆರ್’ಸಿಬಿ ಪರ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.

LEAVE A REPLY

Please enter your comment!
Please enter your name here