ಕ್ರೀಡೆಗಳಲ್ಲಿ ಭಾಗವಹಿಸುವು ಮುಖ್ಯ

0
20

ಬಳ್ಳಾರಿ:

   ಯಾವುದೇ ಕ್ರೀಡೆಗಳಿರಲಿ, ಪ್ರತಿಯೋಬ್ಬರೂ ಭಾಗವಹಿಸಲು ಮುಂದಾಗಬೇಕು. ಕ್ರೀಡೆಗಳಲ್ಲಿ ಸೋಲು ಗೆಲುವು ಇರುವುದು ಸಹಜ ಆದರೇ, ಭಾಗವಹಿಸುವುದು ಬಹುಮುಖ್ಯ ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಅರುಣ್ ರಂಗಜರಾನ್ ಅವರು ಹೇಳಿದರು.

   ನಗರದ ಪೊಲೀಸ್ ಜಿಮ್‍ಖಾನಾದಲ್ಲಿ ಅಖಿಲ ಭಾರತ ಟೆನ್ನೀಸ್ ಅಸೋಸಿಯೇಶನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 12ವರ್ಷದೊಳಗಿನ ಮಕ್ಕಳ ಟೆನ್ನೀಸ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಆರೋಗ್ಯ ವೃಧ್ಧಿಯಾಗಲಿದೆ. ಇದರ ಜೊತೆಗೆ ಆವರಿಸುವ ನಾನಾ ಖಾಯಿಲೆಗಳು ದೂರವಾಗಲಿವೆ. ವಿಶೇಷವಾಗಿ ಮಕ್ಕಳು ಭಾಗವಹಿಸಿದರೇ ಆರೋಗ್ಯ ಸದೃಢವಾಗುವದರ ಜೊತೆಗೆ ಖಾಯಿಲೆಗಳು ದೂರವಾಗಲಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗಳಿಗೂ ಮೊದಲ ಆದ್ಯತೆ ನೀಡಬೇಕು ಎಂದರು.

   12ವರ್ಷದ ಒಳಗಿನ ಮಕ್ಕಳೀಗೆ ಆಯೋಜಿಸಿದ್ದ ಟೆನ್ನೀಸ್ ಪಂದ್ಯಾವಳಿಯಲ್ಲಿ ಮಕ್ಕಳು ಭಾಗವಹಿಸಿದ್ದು, ಸೋಲು ಹಾಗೂ ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ನೀಡಿದ ತೀರ್ಪಿಗೆ ಕ್ರೀಡಾಪಟುಗಳು ಒಪ್ಪಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅವರೊಂದಿಗೆ ವಾದ, ವಿವಾದಕ್ಕೆ ಇಳಿಯಬಾರದು ಎಂದು ಸಲಹೆ ನೀಡಿದರು. ಡಿಎಫ್‍ಒಡಿಆರ್ ರಮೇಶ್ ಅವರು ಮಾತನಾಡಿ, ಟೆನ್ನೀಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ಮೂಡಿಸಿದೆ ಎಂದರು. ನಂತರ ಟೆನ್ನೀಸ್ ಸರ್ವಿಸ್ ಮಾಡುವ ಮೂಲಕ ಬಾಲಕರ ಪಂದ್ಯಾವಳಿಗೆ ಚಾಲನೆ ನೀಡಿದರು. ಡಿಎಫ್‍ಒಡಿಆರ್ ಮಾಲತೀ ಪ್ರೀಯಾ ರಮೇಶ್ ಅವರು ಮಹಿಳಾ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಖಿಲ ಭಾರತ ಟೆನ್ನೀಸ್ ಅಸೋಸಿಯೇಶನ್ ಕಾರ್ಯನಿರ್ವಾಹಕ ಅಧ್ಯಕ್ಷ ಜಿತೇಂದ್ರ ಬಾಬು, ಕಾರ್ಯದರ್ಶಿ ರವಿ ರಾಜಶೇಖರ ರೆಡ್ಡಿ, ಖಜಾಂಚಿ ರಾಜಶೇಖರ್, ಗಣಿ ಉದ್ಯಮಿ ಇಕ್ಬಾಲ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಪ್ಪಣ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here