ಗಾಯತ್ರಿ ವಿಹಾರದಲ್ಲಿ ಬೃಹತ್ ಏಷ್ಯಾ ವೆಡ್ಡಿಂಗ್ ಶೋ

ಬೆಂಗಳೂರು

    ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತ್ಯಂತ ವರ್ಣ ರಂಜಿತ ?ಏಷ್ಯಾ ವೆಡ್ಡಿಂಗ್ ಶೋ -2023? ನಗರದ ನಾಗರಿಕರನ್ನು ಸಮ್ಮೋಹನಗೊಳಿಸಲು ಸಜ್ಜಾಗಿದೆ.

    ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸೆಪ್ಟೆಂಬರ್ 8-9-10 ರ ವರೆಗೆ 3ದಿನಗಳು ಬೃಹತ್ ವೆಡ್ಡಿಂಗ್ ಮೇಳ ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ನಗರದ ನಾಗರಿಕರನ್ನು ಸೆಳೆಯಲಿದೆ. ಮದುವೆ ಹಂಗಾಮ ಆರಂಭವಾಗಿರುವ ಸಂದರ್ಭದಲ್ಲೇ ವಧುವಿನ ಆಭರಣ, ಉಡುಪು, ಮದುವೆಗೆ ಅಗತ್ಯವಾಗಿರುವ ಎಲ್ಲವವನ್ನೂ ಒಂದೇ ವೇದಿಕೆಗೆ ತರಲಾಗುತ್ತಿದೆ. ಇದು ಅತ್ಯಂತ ವಿಶೇಷವಾದ ಮೇಳವಾಗಿದ್ದು, ಈ ವಿಶೇಷ ಮತ್ತು ವಿನೂತನ ಮೇಳವನ್ನು ಮಹಿಳಾ ಸಿಬ್ಬಂದಿ ಉದ್ಘಾಟಿಸಲಿದ್ದಾರೆ.

    ಸಾಂಪ್ರದಾಯಿಕ ವಸ್ತಾçಭರಣಗಳು, ವಧುವಿಗೆ ಬೇಕಾಗಿರುವ ಕಾಂಚಿಪುರA, ಬನಾರಸ್ ಮತ್ತಿತರ ರೇಷ್ಮೇ ಸೀರೆಗಳು, ಅಮೂಲ್ಯ ಕಲ್ಲುಗಳು ಮತ್ತು ಹರಳುಗಳು, ಮದುವೆ ಆಯೋಜಕರ ನೆರವು, ಮದುವೆ ಉಡುಗೊರೆಗಳು ಹೀಗೆ ನಾನಾ ರೀತಿಯ ಸೇವೆ ಮತ್ತು ಸೌಕರ್ಯಗಳು ದೊರೆಯಲಿವೆ.

    ಎಲ್ಲಾ ಆಯಾಮಗಳಲ್ಲೂ ಮದುವೆಗೆ ಬೇಕಾಗಿರುವ, ಮದುವೆಯನ್ನು ಅತ್ಯಂತ ಸುಗಮ ಮತ್ತು ಸುಲಲಿತಗೊಳಿಸುವ ವಿಶಿಷ್ಟವಾದ ಮೇಳ ಇದಾಗಿದೆ. ದೇಶದ ಪ್ರಮುಖ ಆಭರಣ ಮಾರಾಟಗಾರರಿಗೂ ಇದು ವೇದಿಕೆಯಾಗಿದ್ದು, ಮದುವೆಗೆ ಅಗತ್ಯವಾಗಿರುವ ಬ್ರಾಂಡ್ ಗಳನ್ನು ಮೇಳದ ಮೆರಗು ಹೆಚ್ಚಿಸಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap