ಗೌಡರಿಗೆ 28 ಮಕ್ಕಳಿದ್ದಿದ್ದರೆ, ಅವರೇ ಎಲ್ಲಾ ಕ್ಷೇತ್ರಕ್ಕೂ ಅಭ್ಯರ್ಥಿಗಳು!!?

0
20

ಶಿವಮೊಗ್ಗ:

      ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ 28 ಮಕ್ಕಳಿದ್ದಿದ್ದರೇ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಅವರ ಕುಟುಂಬದವರೇ ಸ್ಪರ್ಧಿಸಬಹುದಿತ್ತು. ಆದರೆ ಅವರಿಗೆ ಕಡಿಮೆ ಮಕ್ಕಳಾಗಿರುವುದು ನೋವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

      ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ದೇವೇಗೌಡರಿಗೆ 28 ಮಕ್ಕಳಿದ್ದಿದರೆ ಎಲ್ಲಾ ಕ್ಷೇತ್ರಕ್ಕೂ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದರು. ಇಲ್ಲ 14 ಜನ ಗಂಡು ಮಕ್ಕಳಿದ್ದಿದ್ದರೆ 14 ಮಕ್ಕಳನ್ನು, ‌14 ಜನ ಸೊಸೆಯಂದಿರನ್ನ ಚುನಾವಣೆಗೆ ನಿಲ್ಲಿಸುತ್ತಿದ್ದರು ಎಂದು ವ್ಯಂಗ್ಯವಾಗಿ ಹೇಳಿದರು.

      ರಾಜ್ಯದಲ್ಲಿ ದೊಂಬರಾಟ ನಡೆಯುತ್ತಿದೆ. ದೇವೇಗೌಡರು ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎನ್ನುತ್ತಾರೆ. ಆದರೆ, ಕುಮಾರಸ್ವಾಮಿ, ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ನಿಖಿಲ್, ಪ್ರಜ್ವಲ್ ಇವರ್‍ಯಾರು ತಮ್ಮ ಕುಟುಂಬದವರಲ್ಲ. ನಾನೊಬ್ಬ ಬ್ರಹ್ಮಚಾರಿ ಎಂದು ಘೋಷಿಸಲಿ ಎಂದು ಒತ್ತಾಯಿಸಿದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

LEAVE A REPLY

Please enter your comment!
Please enter your name here