ಚಂಡಮಾರುತ & ಬಿರುಗಾಳಿ ವ್ಯತ್ಯಾಸ ತಿಳಿಸಿದ IMD

ಬೆಂಗಳೂರು: 

      ದೇಶದ ವಿವಿಧ ರಾಜ್ಯಗಳಲ್ಲಿ ಹವಾಮಾನದಲ್ಲಿ ಬದಲಾವಣೆ ಆಗಿದೆ. ಬೇಸಿಗೆ ಮಧ್ಯ ವಿಪರೀತ ಮಳೆ ಆಗುತ್ತಿದೆ. ಕರ್ನಾಟಕದಲ್ಲಂತೂ ಗುಡಗು ಮಿಂಚು ಸಹಿತ ವ್ಯಾಪಕ ಮಳೆ ಮುಂದುವರಿದಿದೆ. ತೆಲಂಗಾಣ, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ವಿವಿಧೆಡೆ ಭಾರೀ ಮಳೆ ಆಗುತ್ತಿದ್ದು, ಇದಕ್ಕೆ ‘ಶಕ್ತಿ’ ಚಂಡಮಾರುತ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಹವಾಮಾನ ತಜ್ಞರುಇದನ್ನು ನಿರಾಕರಿಸಿದ್ದಾರೆ. ಸಮುದ್ರ ಭಾಗದಲ್ಲಿ ಚಂಡಮಾರುತ ಎದ್ದಿದೆಯೇ?, ಭಾರೀ ಮಳೆಗೆ ಕಾರಣವೇನು? ಎಂಬುದರ ಬಗ್ಗೆ ಹವಾಮಾನ ಇಲಾಖೆ (IMD) ಸ್ಪಷ್ಟನೆ ನೀಡಿದೆ.

     ‘ಶಕ್ತಿ’ ಸೈಕ್ಲೋನ್ ಉಂಟಾಗಿದೆ ಎಂಬುದು ತಪ್ಪು ಮಾಹಿತಿಯಾಗಿದೆ. ಈ ಕುರಿತು ಐಎಂಡಿ ಮಹತ್ವದ ಸ್ಪಷ್ಟೀಕರಣ ಜೊತೆಗೆ ವೈಪರೀತ್ಯಗಳ ಕುರಿತು ತಿಳಿಸಿದೆ. ಮಳೆ ಬೀಳುವ ಪ್ರದೇಶಗಳಲ್ಲಿ ಸಾರ್ವಜನಿಕರು ಶಾಂತವಾಗಿರಬೇಕು. ಚಂಡಮಾರುತ ಪ್ರಸರಣ ಮತ್ತು ಸ್ಪಷ್ಟ ಚಂಡಮಾರುತ ಮಧ್ಯ ಸಾಕಷ್ಟು ವ್ಯತ್ಯಾಸವಿದೆ. ಈ ಹವಾಮಾನ ಬಗ್ಗೆ ತಪ್ಪಾಗಿ ಹೇಳಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಶಕ್ತಿ ಸೈಕ್ಲೋನ್ ಎಫೆಕ್ಟ್, ಹಾನಿ ಕುರಿತು ಮಾಹಿತಿ ಹರಡಲಾಗುತ್ತದೆ. ಯಾವೊಂದು ಸೈಕ್ಲೋನ್ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

    ಹವಾಮಾನ ಬೆಳಣಿಕಗೆ ತೀವ್ರತೆ ಕುರಿತು, ಅದರ ಪ್ರಭಾವ ಕುರಿತು ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ. ‘ಸೈಕ್ಲೋನಿಕ್’ ಎಂಬುದನ್ನೇ ಅನೇಕರು ಚಂಡಮಾರುತ ಎಂದು ಅರ್ಥೈಸಿಕೊಳ್ಳುತ್ತಾರೆ. ಸೈಕ್ಲೋನಿಕ್ ಅಂದರೆ ಅದು ಚಂಡಮಾರುತ ಅಲ್ಲ ಎಂದು ಕೋಲ್ಕತ್ತಾದ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಹಬೀಬುರ್ ರೆಹಮಾನ್ ಬಿಸ್ವಾಸ್ ತಿಳಿಸಿದ್ದಾರೆ.

    ಚಂಡಮಾರುತ ಪ್ರಸರಣ ಬೇರೆ, ಚಂಡಮಾರುತ ಬೇರೆಯಾಗಿದೆ. ಸಮುದ್ರ ಮೇಲ್ಭಾಗದ ಒಂದೆಡೆ ಗಾಳಿ ಜಮೆ ಆಗುವ ವಿದ್ಯಮಾನವನ್ನು ಸೈಕ್ಲೋನಿಕ್ ವಿದ್ಯಮಾನ ಎನ್ನಲಾಗುತ್ತದೆ. ಇಲ್ಲಿ ಗಾಳಿಯು ನೆಲದಿಂದ 1.5 ಕಿಮೀ ನಿಂದ 7.6 ಕಿಮೀ ಎತ್ತರದಲ್ಲಿರುತ್ತದೆ. ಇದು ಸೈಕ್ಲೋನಿಕ್ ಪ್ರಸರಣವಾಗಿದೆ. ಒಂದೆಡೆ ಮಾರುತಗಳು ಜಮೆ ಆಗುತ್ತವೆ. ಇದು ಚಂಡಮಾರುತ ಸೃಷ್ಟಿಗೆ ಕಾರಣವಾಗುವುದು ಅನುಮಾನ ಎನ್ನಲಾಗಿದೆ.

   ಸಮುದ್ರ ಮೇಲ್ಮೈನಲ್ಲಿ ಕಡಿಮೆ-ಒತ್ತಡದ ವ್ಯವಸ್ಥೆ ಇದಾಗಿದೆ. ಕಡಿಮೆ ಒತ್ತಡವು ಚಂಡಮಾರುತ ಎನ್ನಲಾಗುವುದಿಲ್ಲ. ಇಲ್ಲಿ ಸಹ ಬಲವಾದ ಗಾಳಿ ಬೀಸುತ್ತಿರುತ್ತದೆ. ಇದು ವಾಯುಭಾರ ಕುಸಿತಕ್ಕೆ ಕಾರಣವಾಗಬಹುದು. ಗಾಳಿಯ ಪ್ರಸರಣ ಅಷ್ಟಾಗಿ ಹಾನಿ ಮಾಡುವುದಿಲ್ಲ. ಆದರೆ ಚಂಡಮಾರುತ ಸಾಕಷ್ಟು ಹಾನಿ ಮಾಡುವ ವೈಪರೀತ್ಯವಾಗಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿಲ್ಲ. ಚಂಡಮಾರುತ ಪ್ರಸರಣ ಎಂದಷ್ಟೆ ಹೇಳಿದೆ ಹೊರತು ಎಲ್ಲಿಯೂ ಶಕ್ತಿ ಸೈಕ್ಲೋನ್ ಸೃಷ್ಟಿಯಾಗಿದೆ ಎಂದು ಖಚಿತಪಡಿಸಿಲ್ಲ.

Recent Articles

spot_img

Related Stories

Share via
Copy link