10ಕ್ಕೂ ಹೆಚ್ಚು ಜನರ ಮೇಲೆ ಚಾಕುವಿನಿಂದ ಹಲ್ಲೆ
ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ಜವಾಬ್ದಾರಿ ನನ್ನದು : ಡಾ.ಕೆ ಸುಧಾಕರ್
ಚಿಕ್ಕಬಳ್ಳಾಪುರ: ನಗರದಲ್ಲಿ ಬೈಕ್‍ನಲ್ಲಿ ಬಂದ ಅನಾಮಿಕ ಯುವಕನೊಬ್ಬ ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಹುಚ್ಚಾಟ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ಬಲಮುರಿ ವೃತ್ತದಲ್ಲಿ ನಡೆದಿದೆ.
ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ನಗರಸಭೆ, ಕಾರ್ಖಾನೆ ಪೇಟೆ, ಬಿಬಿ ರಸ್ತೆ, ಅಂಬಿಕಾ ಮೆಡಿಕಲ್ಸ್ ಮತ್ತಿತರ ಪ್ರದೇಶದಲ್ಲಿ ನಿಂತಿದ್ದವರಿಗೆ ಚಾಕುವಿನಿಂದ ಚುಚ್ಚಿ ಪರಾರಿ ಆಗಿದ್ದಾನೆ. ಬೈಕ್ ನಲ್ಲಿ ವೇಗವಾಗಿ ತೆರಳುತ್ತಿದ್ದ ಅಪರಿಚಿತ ಒಂದು ಕೈಯಲ್ಲಿ ಚಾಕು ಹಿಡಿದು ದಾರಿಯಲ್ಲಿ ಸಿಕ್ಕ ಸಿಕ್ಕವರಿಗೆ ಚುಚ್ಚಿ ಪರಾರಿಯಾಗಿದ್ದಾನೆ. ಇದರಿಂದ ಚಿಕ್ಕಬಳ್ಳಾಪುರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಘಟನೆಯಿಂದ ಸ್ವಾತಿ, ಮನೋಹರ್, ಸಂತೋಷ್, ರೆಹಮಾನ್, ಅರೀಫ್ ಹಾಗೂ ಮುನಿರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರಿಗೆ ಕಣ್ಣಿನ ಗುಡ್ಡೆ ಕಿತ್ತು ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಯುವಕ 8ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ಅವರಲ್ಲಿ 7ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಘಟನಾ ಸ್ಥಳಕ್ಕೆ ಹಾಗೂ ಖಾಸಗಿ ಆಸ್ಪತ್ರೆ ಎಸ್‍ಪಿ ಡಿ.ಎಲ್.ನಾಗೇಶ್ ಭೇಟಿ ನೀಡಿದ್ದು ಗಾಯಾಳುಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ರೌಡಿ ಶೀಟರ್ ಬಂಧನ : ಅರ್ಜುನ್ ಎಂಬ ರೌಡಿ ಶೀಟರ್ ಭಾನುವಾರ ರಾತ್ರಿ ಸಿಕ್ಕ ಸಿಕ್ಕವರ ಮೇಲೆ ಸಿನಿಮೀಯಾ ರೀತಿಯಲ್ಲಿ ಲಾಂಗ್ ಬೀಸಿದ್ದಾನೆ. ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆ ನಡೆದು 3 ಗಂಟೆಗಳ ಒಳಗೆ ಚಿಕ್ಕಬಳಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಮೂವರು ಮಹಿಳೆಯರು ಹಾಗೂ ನಾಲಕ್ಕು ಪುರುಷರ ಮೇಲೆ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ರಾತ್ರಿ ನಡೆದ ಹಲ್ಲೆ ಪ್ರಕರಣದಲ್ಲಿ ದುಷ್ಕರ್ಮಿಯನ್ನು ಸಾಕ್ಷಿ ಸಮೇತ ಪತ್ತೆಹಚ್ಚಲಾಗಿದ್ದು ತಡರಾತ್ರಿ 3ಗಂಟೆ ಹೊತ್ತಿಗೆ ಬಂಧಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡಿದ್ದ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ಒಬ್ಬರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 6 ಜನ ಗಾಯಾಳುಗಳು ಜೀವಾಪಾಯದಿಂದ ಪಾರಾಗಿದ್ದು ಅವರ ಚಿಕಿತ್ಸಾ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ವಹಿಸಲು ನಿರ್ಧರಿಸಿದ್ದೇನೆ. ದುಷ್ಕರ್ಮಿಯನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲು ರಾತ್ರಿಯಿಡೀ ಶ್ರಮಿಸಿದ ಎಸ್ಪಿ ನಾಗೇಶ್, ಡಿವೈಎಸ್ಪಿ ವಾಸುದೇವ್, ಸರ್ಕಲ್ ಇನ್ಸ್ಪೆಕ್ಟರ್ ರಾಜು ಮತ್ತು ಎಲ್ಲ ಪೆÇಲೀಸ್ ಸಿಬ್ಬಂದಿಗಳಿಗೆ ಧನ್ಯವಾದಗಳು.
-ಡಾ.ಕೆ ಸುಧಾಕರ್, ಸಚಿವರು.