ಜಿಡಿಪಿ ಕುಸಿತಕ್ಕೆ ಜಿಎಸ್ ಟಿ, ನೋಟ್ ನಿಷೇಧ ಕಾರಣ: ಅರುಣ್ ಜೇಟ್ಲಿ

0
28

ನವದೆಹಲಿ: ದೇಶದ ಆರ್ಥಿಕ ವೃದ್ಧಿ ದರ(ಜಿಡಿಪಿ) ಕುಸಿಯಲು ಜಿಎಸ್ ಟಿ ಜಾರಿ ಮತ್ತು ನೋಟ್ ನಿಷೇಧ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ.

ಕಳೆದ ಐದು ತ್ರೈಮಾಸಿಕಗಳಿಂದ ಕುಸಿಯುತ್ತ ಸಾಗಿದ್ದ ಜಿಡಿಪಿ, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ(ಜುಲೈ– ಸೆಪ್ಟೆಂಬರ್‌)ದಲ್ಲಿ ಶೇ. 6.3ಕ್ಕೆ ಏರಿಕೆಯಾಗಿದ್ದು, ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ, ನೋಟ್ ನಿಷೇಧ ಹಾಗೂ ಜಿಎಸ್ ಟಿ ಜಾರಿಯಿಂದಾಗಿ ಜಿಡಿಪಿ ಕುಸಿದಿತ್ತು. ಈಗ ಮತ್ತೆ ಏರಿಕೆಯಾಗಿದ್ದು, ಮುಂದಿನ ತ್ರೈಮಾಸಿಕದಲ್ಲಿ ಮತ್ತಷ್ಟು ಏರಿಕೆ ಕಾಣುವ ವಿಶ್ವಾಸವಿದೆ ಎಂದಿದ್ದಾರೆ.

ನೋಟು ನಿಷೇಧದ ಬೆನ್ನಲ್ಲೆ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಬಂದ ಆರಂಭಿಕ ದಿನಗಳಲ್ಲಿನ ಗೊಂದಲದ ಫಲವಾಗಿ ತಯಾರಿಕಾ ಚಟುವಟಿಕೆಗಳು ಕುಂಠಿತಗೊಂಡಿದ್ದರಿಂದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿತ್ತು.

ಕೇಂದ್ರೀಯ ಸಾಂಖ್ಯಿಕ ಕಚೇರಿ ಇಂದು ಜುಲೈ– ಸೆಪ್ಟೆಂಬರ್‌ ತ್ರೈಮಾಸಿಕದ ಜಿಡಿಪಿ ದರವನ್ನು ಪ್ರಕಟಿಸಿದ್ದು, ಶೇ 6.3ಕ್ಕೆ ಏರಿಕೆಯಾಗಿದೆ

LEAVE A REPLY

Please enter your comment!
Please enter your name here