ಜೆಡಿಎಸ್‌ನವರ ಬಗ್ಗೆ ಕಾಂಗ್ರೆಸ್‌ನವರಿಗೆ ಭಯವಿದೆ : ಕುಮಾರ ಸ್ವಾಮಿ

ಬೆಂಗಳೂರು

     ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾನು ಕುಟುಂಬ ಸಮೇತ ಯೂರೋಪ್ ಪ್ರವಾಸಕ್ಕೆ ಹೋಗಿದ್ದೆ. ಆದರೆ,ಸರ್ಕಾರ ಕೆಡವಲು ಹೋಗಿದ್ದೇ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಜೆಡಿಎಸ್‌ನವರ ಬಗ್ಗೆ ಕಾಂಗ್ರೆಸ್‌ನವರಿಗೆ ಎಷ್ಟುಭಯವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು.

     ವಿದೇಶ ಪ್ರವಾಸದಿಂದ ಹಿಂದಿರುಗಿರುವ ಕುಮಾರಸ್ವಾಮಿ ಅವರು, ವಿದೇಶದಲ್ಲಿದ್ದರೂ ರಾಜ್ಯದ ರಾಜಕೀಯ ವಿದ್ಯಮಾನಗಳ ನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೆನೆ. ನಾನು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ದರೂ ಸರ್ಕಾರ ಉರುಳಿಸಲು ಹೋಗಿದ್ದೇನೆ ಎಂದು ಹೇಳಿದ್ದಾರೆ. ಜೆಡಿಎಸ್ 19 ಸ್ಥಾನ ಗೆದ್ದಿದ್ದರೂ ಅವರಿಗೆ ನಮ್ಮಭಯ ಇದೆ ಎಂಬುದನ್ನು ಕಾಣಬಹುದು ಎಂದರು. ರಾಜ್ಯ ಗುಪ್ತಚರ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಹೊತ್ತಾಗಿದೆ. ನಾವು ವಿದೇಶಕ್ಕೆ ಹೋಗಿರುವುದು ಸರ್ಕಾರ ಉರುಳಿಸಲು ಎಂಬಂತೆ ಬಿಂಬಿಸಿದ್ದಾರೆ. ಬಹುಶಃ ಅವರ ಸರ್ಕಾರದ ಅವಧಿ ಬಹಳ ದಿನ ಇರುವುದಿಲ್ಲ ಎಂದು ಅಂದುಕೊಂಡಿರಬೇಕು ಎಂದರು.

    ಡಿಕೆ. ಶಿವಕುಮಾರ್‌ರವರು ನಮಗಿಂತ ಜಾಸ್ತಿ ಶಾಸ್ತç ಕೇಳುತ್ತಾರೆ ಜ್ಯೋತಿಷ್ಯದವರನ್ನು ಬಹಳ ನಂಬುತ್ತಾರೆ. ಹಲವು ರೀತಿ ಕುತಂತ್ರಗಳನ್ನು ಜ್ಯೋತಿಷ್ಯದ ಮೂಲಕ ಮಾಡಿ ಕೃತಕ ಶಕ್ತಿಯನ್ನು ಚುನಾವಣೆ ಸಂದರ್ಭದಲ್ಲಿ ತುಂಬಿಕೊAಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರುವುದಿಲ್ಲ ಎಂದು ಅವರಿಗೆ ಗೊತ್ತಾಗಿರಬೇಕು. ಅದಕ್ಕಾಗಿ ನಮ್ಮಮೇಲೆ ಸರ್ಕಾರ ಉರುಳಿಸುವ ಷಡ್ಯಂತ್ರ ನಡೆದಿದೆ ಎಂಬ ಹೇಳಿಕೆ ನೀಡಿರಬೇಕು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್ ನಡೆದಿದೆ ಎಂದು ಈ ಹಿಂದೆ ಆರೋಪಿಸಿದ್ದ ಕುಮಾರಸ್ವಾಮಿ ಮತ್ತೆ ವೈಎಸ್‌ಟಿ ಟ್ಯಾಕ್ಸ್ ಬಾಂಬ್‌ನ್ನು ಸಿಡಿಸಿದ್ದು, ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ವೈಎಸ್‌ಟಿ ನವರಿಗೆ ಏನು ಕೆಲಸ ಎಂದು ಪ್ರಶ್ನಿಸಿದರು.

    ಬೆಂಗಳೂರಿನ ಗರುಡ ಮಹಲ್‌ನಲ್ಲಿ ಪೊಲೀಸ್ ಡ್ರೆಸ್‌ನಲ್ಲಿ ಗೃಹ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‌ಟಿನವರು ಏಕೆ ಇದ್ದರು ಎಂದು ಪ್ರಶ್ನಿಸಿದರು.

    ಸಚಿವರುಗಳನ್ನು ಜತೆಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್‌ಗೆ ರಿಪೋರ್ಟ್ ಕಾರ್ಡ್ ಕೊಟ್ಟಿದ್ದಾರೆ. ರಿಪೋರ್ಟ್ ಕಾರ್ಡ್ನ್ನು ಹೈಕಮಾಂಡ್‌ಗೆ ಕೊಡುವುದಲ್ಲ. ಜನತೆಯ ಮುಂದಿಡಬೇಕು.ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಪೆನ್‌ ಡ್ರೈವ್‌ನ್ನು ಈಗ ಬಿಡುಗಡೆ ಮಾಡುವುದಿಲ್ಲ. ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap