ಜೆರುಸಲೇಮ್ ಕುರಿತು ಅಮೆರಿಕ ನಿರ್ಧಾರಕ್ಕೆ ಯುಎಸ್ಎಸ್ ಸಿ ಎಚ್ಚರಿಕೆ

0
19

ವಿಶ್ವಸಂಸ್ಥೆ: ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯನ್ನಾಗಿ ಗುರುತಿಸುವ ಅಮೆರಿಕದ ನಿರ್ಧಾರವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಟೀಕಿಸಿದ್ದು, ಎಚ್ಚರಿಕೆ ನೀಡಿದೆ. ಅಮೆರಿಕದ ನಿರ್ಧಾರದಿಂದ ಜೆರುಸಲೇಮ್ ಇರುವ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಲಿದೆ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಎಚ್ಚರಿಸಿದೆ.

ಮೆರಿಕದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫ್ರಾನ್ಸ್ ನ ಪ್ರತಿನಿಧಿ ಫ್ರಾಂಕೋಯಿಸ್ ಡೆಲಾಟ್ಟರ್, ಅಮೆರಿಕದ ನಿರ್ಧಾರದಿಂದ ಜೆರುಸಲೇಮ್ ವಿಷಯವಾಗಿ ಧಾರ್ಮಿಕ ಸಂಘರ್ಷ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಕೌನ್ಸಿಲ್ ನ ಅನೇಕ ನಿರ್ಣಯಗಳನ್ನು ಉಲ್ಲೇಖಿಸಿರುವ ಫ್ರಾನ್ಸ್ ನ ಪ್ರತಿನಿಧಿ ಜೆರುಸಲೇಮ್ ನಗರಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರ ಅನೂರ್ಜಿತ ಹಾಗೂ ನಿರರ್ಥಕವಾಗಿರಲಿದೆ ಎಂದು ಹೇಳಿದ್ದಾರೆ.

ಜೆರುಸಲೇಮ್ ಗೆ ಸಂಬಂಧಿಸಿದಂತೆ ಅಮೆರಿಕದ ನಿರ್ಧಾರವನ್ನು ವಿರೋಧಿಸಿ ಸಾವಿರಾರು ಪ್ಯಾಲೆಸ್ತೇನಿ ಜನರು ನ್ಯೂಯಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here