ತಿಪಟೂರು
ನಗರದ ಪ್ರತಿಷ್ಠಿತ ಜೈ ಮಾರುತಿ ಟೆಕ್ವಾಂಡ್ ಕರಾಟೆ ಶಾಲೆಯಿಂದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಗೆ ಸಂಭವಿಸಿದ ನೆರೆ ಪ್ರವಾಹಕ್ಕೆ ಸಿಲುಕಿದ ಪ್ರವಾಹ ಪೀಡಿತ ಜನತೆಗೆ ತಮ್ಮ ಶಾಲೆಯ ವತಿಯಿಂದ ಧನಸಹಾಯ ಹಾಗೂ ಔಷಧಿಗಳನ್ನು ಕಳುಹಿಸಿಕೊಡಲಾಯಿತು.
ಇದೇ ವೇಳೆ ಶಾಲೆಯ ಸಂಸ್ಥಾಪಕರಾದ ವಿನಯ್ ಕುಮಾರ್ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೊಡಗು ಜನರು ಅನುಭವಿಸುತ್ತಿರುವ ಕಷ್ಟಗಳಿಗೆ ನೆರವಾಗಲು ನಮ್ಮ ಶಾಲೆಯ ವತಿಯಿಂದ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ದೇಣಿಗೆಯನ್ನು ನೀಡುತ್ತಿದ್ದು ಆ ಮೂಲಕ ಅವರ ಕಷ್ಟಗಳಿಗೆ ಭಾಗಿಯಾಗುತ್ತಿದ್ದು ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿರುವುದು ನಮ್ಮ ಶಾಲೆಯ ಉದ್ದೇಶವಾಗಿದ್ದು, ಇಂದು ಅಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಅಲ್ಲಿನ ಜನರಿಗೆ ಕೇವಲ ಹಣದ ಸಹಾಯದ ಜೊತೆಗೆ ಅವಶ್ಯಕ ಔಷಧಿಗಳನ್ನು ನೀಡುತ್ತಿರುವುದು ಖುಷಿಯ ಸಂಗತಿ ಎಂದ ಅವರು, ಮಕ್ಕಳಲ್ಲಿ ಯಾವಾಗಲು ವಿದ್ಯೆಯ ಜೊತೆಗೆ ಮತ್ತೊಬ್ಬರಿಗೂ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ಬೆಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಮಳೆಯ ಅಭಾವದಿಂದ ಅಲ್ಲಿನ ಅನೇಕ ಕುಟುಂಬಗಳು ಮನೆ, ಕುಟುಂಬ, ಸಂಬಂಧಿಕರನ್ನು ಕಳೆದುಕೊಂಡು ತಿನ್ನಲು ಆಹಾರವಿಲ್ಲದೆ ಪ್ರತಿನಿತ್ಯ ಪರದಾಡುವಂತಾಗಿದೆ. ಅದಕ್ಕಾಗಿ ನಮ್ಮ ಸಂಸ್ಥೆಯ ವತಿಯಿಂದ ಅಲ್ಲಿನ ಸಂತ್ರಸ್ತರ ಉಪಯೋಗಕ್ಕಾಗಿ ಸ್ವಲ್ಪ ಸಹಾಯವನ್ನು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
