ಟರ್ಕಿ ಹೋಟೆಲ್’ನಲ್ಲಿ ಭಾರೀ ಅಗ್ನಿ ಅವಘಡ : ಮೃತರ ಸಂಖ್ಯೆ 76ಕ್ಕೆ ಏರಿಕೆ

ಅಂಕಾರ:

  ವಾಯವ್ಯ ಟರ್ಕಿಯಲ್ಲಿನ ಜನಪ್ರಿಯ ಸ್ಕೀ ರೆಸಾರ್ಟ್‍ನಲ್ಲಿನ ಭಾರೀ ಅಗ್ನಿಘಡದಲ್ಲಿ ಮೃತರ ಸಂಖ್ಯೆ 76ಕ್ಕೆ ಏರಿಕೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.ಟರ್ಕಿಯ ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್‌ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಹೋಟೆಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

   ಘಟನೆಗೆ ಪ್ರಮುಖ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ವೇಳೆ ರೆಸಾರ್ಟ್​ನಲ್ಲಿದ್ದ ತಂದಿದ್ದ ನೂರಾರು ಮಂದಿ ಭಯಭೀತರಾಗಿದ್ದು, ಕೆಲವರು ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಒಟ್ಟು 76 ಮಂದಿ ಸಾವನ್ನಪ್ಪಿದ್ದು, 51ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಹೋಟೆಲ್‌ನಲ್ಲಿ 234 ಅತಿಥಿಗಳು ತಂಗಿದ್ದರು ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ತಿಳಿಸಿವೆ.

   ಕಟ್ಟಡ ಕುಸಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು ಹೋಟೆಲ್‍ನಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಈ ನಡುವೆ ಅಗ್ನಿ ಅವಘಡಕ್ಕೆ ಕಾರಣ ಏನೆಂಬ ಬಗ್ಗೆ ತನಿಖೆ ಮುಂದುವರೆದಿದ್ದು, ತನಿಖೆಗಾಗಿ 6 ಪ್ರಾಸಿಕ್ಯೂಟರ್‌ಗಳನ್ನು ಸರ್ಕಾರ ನೇಮಿಸಿದೆ.ಏತನ್ಮಧ್ಯೆ ಕೇಂದ್ರ ಟರ್ಕಿಯಲ್ಲಿ ಇರುವ ಮತ್ತೊಂದು ಸ್ಕಿ ರೆಸಾರ್ಟ್‌ನ ಹೋಟೆಲ್‌ವೊಂದರಲ್ಲಿ ಅಡುಗೆ ಅನಿಲ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link