ನವದೆಹಲಿ:
ಅಮೆರಿಕದ ಟೆಕ್ಸಾಸ್‌ನಿಂದ ಈ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ 25 ವರ್ಷ ವಯಸ್ಸಿನ ಭಾರತ ಮೂಲದ ಮಹಿಳೆಯ ಮೃತದೇಹ ಒಕ್ಲಹೋಮಾ ರಾಜ್ಯದಲ್ಲಿ ಪತ್ತೆಯಾಗಿದೆ. ಒಕ್ಲಹೋಮ ರಾಜ್ಯದಲ್ಲಿ ಸುಮಾರು 322 ಕಿಲೋಮೀಟರ್ ದೂರದಲ್ಲಿ ಲಹರಿ ಶವ ಪತ್ತೆಯಾಗಿದೆ. ನಿಗೂಢವಾಗಿ ಸಾವಿಗೀಡಾಗಿರುವ ಯುವತಿ ಭಾರತ ಮೂಲದ ಲಹರಿ ಪಟಿವಾಡ ಎಂದು ತಿಳಿದುಬಂದಿದೆ. ಲಹರಿ ಕೊನೆಯ ಬಾರಿ ಮೆಕ್‌ಕಿನ್ಲೆ ಉಪನಗರದಲ್ಲಿ ಕಪ್ಪು ಟೊಯೋಟಾ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವುದು ಕಂಡುಬಂದಿತ್ತು.
ಟೆಕ್ಸಾಸ್‌ನ ಡಬ್ಲ್ಯುಓಡಬ್ಲ್ಯು ಸಮುದಾಯ ಗುಂಪು ಮಹಿಳೆಯ ಬಗೆಗಿನ ಮಾಹಿತಿ ಹಂಚಿಕೊಂಡಿದ್ದು, ಮೇ 13ರಂದು ಯುವತಿಯ ಮೃತದೇಹ ಪತ್ತೆಯಾದ ಸನ್ನಿವೇಶದ ಬಗ್ಗೆ ಯಾವುದೇ ವಿವರ ಹಂಚಿ ಕೊಂಡಿಲ್ಲ. ಈ ನಿಗೂಢ ಸಾವು ಅವರ ಕುಟುಂಬ, ಸ್ನೇಹಿತರು ಹಾಗೂ ಸ್ಥಳೀಯ ಸಮುದಾಯದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಮನರಂಜನಾ ತಾಣಗಳಲ್ಲಿ ಸುರಕ್ಷಾ ಕ್ರಮಗಳ ಅಗತ್ಯತೆಯನ್ನು ಈ ಪ್ರಕರಣ ಎತ್ತಿ ತೋರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ