ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚರ ಎಸಗಿದ್ದ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಉಮೇಶಯ್ಯ ವಿರುದ್ಧದ ಆರೋಪ ಸಾಬೀತಾಗಿದೆ.
2017ರ ಜ.15ರಂದು ನೈಟ್ ರೌಂಡ್ಸ್ನಲ್ಲಿದ್ದ ಮಹಿಳಾ ಠಾಣೆ ಎಎಸ್ಐ ಉಮೇಶಯ್ಯ, ತುಮಕೂರು ನಗರದ ಅಂತರಸನಹಳ್ಳಿ ಸೇತುವೆ ಬಳಿ ಹೋಗುತಿದ್ದ ಬುದ್ಧಿಮಾಂದ್ಯೆಯನ್ನು ಖಾಸಗಿ ಜೀಪ್ನಲ್ಲಿ ಕೂರಿಸಿಕೊಂಡು ಅತ್ಯಾಚಾರ ಎಸಗಿದ್ದ.
ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು, ಪೊಲೀಸ್ ಇಲಾಖೆಯೂ ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದ ಉಮೇಶಯ್ಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ದಟ್ಟವಾಗಿ ಕೇಳಿಬಂದಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಆರೋಪ ಸಾಬೀತಾಗಿದ್ದು ಉಮೇಶಯ್ಯ ತಪ್ಪಿತಸ್ಥನೆಂದು ನಿನ್ನೆ(ಜ.28) ತೀರ್ಪು ನೀಡಿದ್ದಾರೆ. ಜ.31ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.
ಸರ್ಕಾರಿ ಅಭಿಯೋಜಕಿ ವಿ.ಎ. ಕವಿತಾ ವಾದ ಮಂಡಿಸಿದ್ದರು. ಎರಡನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರನನ್ನು ನ್ಯಾಯಾಲಯವು ಆರೋಪದಿಂದ ಮುಕ್ತಗೊಳಿಸಿದೆ. ಅಪರಾಧಿ ಉಮೇಶಯ್ಯಗೆ 12 ವರ್ಷ ಜೈಲು ಶಿಕ್ಷೆ ಮತ್ತು ಸಂತ್ರಸ್ತೆಗೆ ಪರಿಹಾರ ಸಿಗುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ