ತುಮಕೂರು
ವಿವಿಯ ಸ್ನಾತಕೋತ್ತರ ಪದವಿಯ 2023-24 ನೆಯ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿರುವುದು ಸರಿಯಷ್ಟೆ. ಆದರೆ ವಿವಿ ಸ್ನಾತಕೋತ್ತರ ಕೇಂದ್ರ ಸೇರಿದಂತೆ ಇತರೆ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲುಜಿಲ್ಲೆಯ ಹಲವು ತಾಲ್ಲೂಕುಗಳಿಂದ ಹಾಗೂ ರಾಜ್ಯದ ನಾನಾ ಜಿಲ್ಲೆಗಳಿಂದ ಬಂದು ಪ್ರವೇಶ ಪಡೆದಿರುವ 250ಕ್ಕೂ ಅಧಿಕ ಹಿಂದುಳಿದ ವರ್ಗಗಳ (ಓಬಿಸಿ) ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗದೆ ಅವರ ಶೈಕ್ಷಣಿಕಭವಿಷ್ಯವೇ ಅತಂತ್ರಕ್ಕೆ ಸಿಲುಕಿದೆ.
ಹೌದು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಹಾಸ್ಟೆಲ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಅವಧಿಯನ್ನು ಈಗಾಗಲೇ ಇಲಾಖೆಯು ಕೊನೆಗೊಳಿಸಿದ್ದು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲಾಗದೆ ಪರದಾಡುವಂತಾಗಿದೆ. ಹಾಸ್ಟೆಲ್ ಲಭ್ಯತೆ ಇರದ ಕಾರಣ ಪಾವಗಡ, ದೊಡ್ಡಬಳ್ಳಾಪುರ, ಚಿತ್ರದುರ್ಗ, ಬಾಣಾವರ ಮುಂತಾದದೂರದ ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿತುಮಕೂರಿಗೆ ಬಂದಿರುವ ವಿದ್ಯಾರ್ಥಿಗಳು ಮುಂದೇನು ಮಾಡುವುದೆಂದು ತಿಳಿಯದೆ ಚಿಂತಾಕ್ರಾoತರಾಗದ್ದಾರೆ.
ಸದರಿ ವಿದ್ಯಾರ್ಥಿಗಳು ಈಗಾಗಲೇ ಶುಲ್ಕ ಪಾವತಿಸಿ ಸ್ನಾತಕೋತ್ತರ ಪದವಿ ಸೇರ್ಪಡೆಗೊಂಡಿದ್ದು, ಹಾಸ್ಟೆಲ್ ಲಭ್ಯವಿಲ್ಲದ ಕಾರಣ ಪ್ರತಿ ದಿನ ತಮ್ಮ ಸ್ಥಳದಿಂದ ವಿಶ್ವವಿದ್ಯಾನಿಲಯಕ್ಕೆಬರಲು ಸತತ ಮೂರುಗಂಟೆಗೂ ಹೆಚ್ಚು ಕಾಲ ಬಸ್‌ನಲ್ಲಿ ಊರಿಂದ ಬರುವಂತಾಗಿದೆ. ತುಮಕೂರಿನಲ್ಲಿ ರೂಂ ಮಾಡಿಕೊಂಡು ಓದಲು ಬಡ ವಿದ್ಯಾರ್ಥಿಗಳಾದ ಇವರಿಗೆ ದುಬಾರಿಯಾಗಿದ್ದು, ದುಬಾರಿ ವೆಚ್ಚವನ್ನು ಭರಿಸಲಾಗದೆ, ಪ್ರಯಾಣಕ್ಕೆ ಐದಾರು ಗಂಟೆ ವ್ಯಯಿಸಲು ಸಾಧ್ಯವಾಗದೆ ಓದುವುದಾದರೂ ಹೇಗೆ ಎಂದು ವಿದ್ಯಾರ್ಥಿಗಳೂ ಅವಲತ್ತುಕೊಳ್ಳುತ್ತಿದ್ದಾರೆ.
ಸರ್ಕಾರ ಜನಪ್ರತಿನಿಧಿಗಳು ಹಿಂದುಳಿದ ವರ್ಗಗಳ ಕಲ್ಯಾಣವೆಂದು ಕೇವಲ ಬಾಯಿ ಮಾತಿನಲ್ಲಿ ಹೇಳುವ ಬದಲು ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳ ಭವಿಷ್ಯವನ್ನುಕಾಪಾಡಲು ಬದ್ಧತೆಯನ್ನುತೋರಿಸಬೇಕು ಎಂದು ವಿದ್ಯಾರ್ಥಿಗಳು ಅವಲತ್ತುಕೊಳ್ಳುತ್ತಿದ್ದು, ಮೆರಿಟ್‌ಆಧಾರದ ಮೇಲೆ ಕಷ್ಟಪಟ್ಟುಓದಿದ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, ಪಿಎಚ್.ಡಿ.ಪದವಿಗಳಿಗೆ ಪ್ರವೇಶ ಪಡೆದು, ಹಾಸ್ಟೆಲ್‌ಇಲ್ಲದಕಾರಣಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಿರುವುದು ಶೈಕ್ಷಣಿಕ ಜಿಲ್ಲೆಯೆಂಬ ಹೆಸರಿಗೆಕಪ್ಪುಚುಕ್ಕೆ ಎಂದಿದ್ದಾರೆ.
೧೯ ವರ್ಷದಿಂದ ವಿವಿಯಲ್ಲಿ ಹಾಸ್ಟೆಲ್ ಸೌಲಭ್ಯವಿಲ್ಲ: ತುಮಕೂರು ವಿಶ್ವವಿದ್ಯಾನಿಲಯವು 19 ವರ್ಷಗಳನ್ನು ಪೂರೈಸಿದ್ದರೂ ಸಹ ಓ.ಬಿ.ಸಿ. ವಿದ್ಯಾರ್ಥಿಗಳಿಗೆ ವಿವಿ ಹಾಸ್ಟೆಲ್ ಸೌಲಭ್ಯ ಕಲ್ಪಿಸದಿರುವುದಕ್ಕೆ ವಿದ್ಯಾರ್ಥಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಪೂರಕ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕಿದೆ.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ಹಿಂದುಳಿದ ವರ್ಗಗಳಇಲಾಖೆಯ ಅಧಿಕಾರಿಗಳಿಗೆ ಸಂಬoಧಿಸಿದ ಸಚಿವರು ಹಾಗೂ ಇಲಾಖೆಯ ವರಿಷ್ಠರು ಸೂಚನೆ ನೀಡಿ, ಶೀಘ್ರವೇ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್‌ಗಾಗಿಆನ್‌ಲೈನ್‌ಅರ್ಜಿ ಸಲ್ಲಿಸಿ, ಪ್ರವೇಶಕಲ್ಪಿಸಲು ಅನುಕೂಲ ಮಾಡಿಕೊಡಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ