ತುರುವೇಕೆರೆ:
ರಾಜಿ ಮಾಡಿಕೊಳ್ಳೋಣ ಎಂದು ಕರೆದು ತಂಡವೊಂದರ ಮೇಲೆ ಮತ್ತೊಂದು ತಂಡ ಮಾರಕಾಸ್ತ್ರಗಳಿಂದ ದಾಳಿ ಕ್ರಾಮಸಂದ್ರ ಪ್ರಸಾದಿ, ಅಬುಕನಹಳ್ಳಿ ಮಂಜ ಅಲಿಯಾಸ್ ಕೋಳಿಮಂಜ, ಮನು ಅಲಿಯಾಸ್ ಅಲ್ಲ ಇವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.ಪ್ರಸಾದಿ ಹಾಗೂ ಕಿರಣ್ ಕುಮಾರ್ ನಡುವೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ 29 ಮಾರ್ಚ್ ರಂದು ಗಲಾಟೆ ನಡೆದಿತ್ತು. ಈ ವಿಚಾರವಾಗಿ ಪ್ರಸಾದಿ ಮೇಲೆ ತುರುವೇಕೆರೆ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿತ್ತು.
ಕೇಸ್ ಹಿನ್ನಲೆಯಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಸದ್ಯ ಕಿರಣ್ ಕುಮಾರನ್ನ ರಾಜೀಗಾಗಿ ಪ್ರಸಾದಿ ಕರೆದಿದ್ದ. ಹೀಗಾಗಿ ಕಿರಣ್ ಜೊತೆ ತೆರಳಿದ್ದ ಸ್ನೇಹಿತರಾದ ದಿಲೀಪ್ ಕುಮಾರ್, ಸಂಜು, ಮೋಹನ್, ಮಂಜುನಾಥ್ ಕೂಡ 3ರಂದು ರಾತ್ರಿ ಯಲ್ಲಿ ಕರೆಕಲ್ಲು ಗ್ರಾಮದ ಬಳಿ ಹೋಗಿದ್ದರು.
ಪ್ರಸಾದಿ ಹಾಗೂ ಕಿರಣ್ ಕುಮಾರ್ ಮಾತಾನಾಡುತ್ತಿದ್ದ ಸಂದರ್ಭದಲ್ಲಿ ಎರಡು ಕಾರಿನಲ್ಲಿ ಬಂದ ಐದಾರು ಜನರ ಗುಂಪು. ಕಾರಿನಲ್ಲಿ ಬಂದ ಪ್ರಸಾದಿ ಸ್ನೇಹಿತರಿಂದ, ಕಿರಣ್ ಕುಮಾರ್ ಹಾಗೂ ಸ್ನೇಹಿತರ ಮೇಲೆ ಲಾಂಗ್ ಮಚ್ಚು ಬೀಸಿ ಕೊಲೆ ಯತ್ನ ನಡೆದಿದೆ.
ಈ ವೇಳೆ ಕಿರಣ್ ಕುಮಾರ್, ಸಂಜು, ಮಂಜುನಾಥ್ ಹಾಗೂ ಮೋಹನ್ ತಪ್ಪಿಸಿಕೊಂಡಿದ್ದರು. ಆದರೆ ದಿಲೀಪ್ ಸಿಕ್ಕಿಬಿದ್ದ ಕಾರಣ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಜೊತೆಗೆ ಕಿರಣ್ ಕುಮಾರ್ ಸ್ನೇಹಿತರು ತಂದಿದ್ದ ಮೂರು ಬೈಕ್ ಗಳಿಗೆ ಬೆಂಕಿ ಆರೋಪಿಗಳು ಹಚ್ಚಿ ಪರಾರಿಯಾಗಿದ್ದರು.ಘಟನೆಯ ಬಳಿಕ ದಿಲೀಪ್ ಸ್ನೇಹಿತರು, ದಿಲೀಪ್ ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.