ಥೈಲ್ಯಾಂಡ್‌: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ

ಬ್ಯಾಂಕಾಕ್:

   ಥೈಲ್ಯಾಂಡ್‌ನ ಫುಕೆಟ್‌ನಿಂದ ಭಾರತದ ರಾಜಧಾನಿ ನವದೆಹಲಿಗೆ ಶುಕ್ರವಾರ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ದ್ವೀಪದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ತುರ್ತು ಯೋಜನೆಗಳಿಗೆ ಅನುಗುಣವಾಗಿ, AI 379 ವಿಮಾನದಲ್ಲಿದ್ದ ಎಲ್ಲಾ 156 ಪ್ರಯಾಣಿಕರನ್ನು ವಿಮಾನದಿಂದ ಹೊರಗೆ ಕರೆದೊಯ್ಯಲಾಯಿತು ಎಂದು ಥೈಲ್ಯಾಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶುಕ್ರವಾರ ಬೆಳಿಗ್ಗೆ 9.30 ಕ್ಕೆ (0230 GMT) ಫುಕೆಟ್ ವಿಮಾನ ನಿಲ್ದಾಣದಿಂದ ಭಾರತದ ರಾಜಧಾನಿಗೆ ಹೊರಟಿದ್ದ ವಿಮಾನವು ಅಂಡಮಾನ್ ಸಮುದ್ರದ ಸುತ್ತಲೂ ವಿಶಾಲವಾದ ಲೂಪ್ ಮಾಡಿ ದಕ್ಷಿಣ ಥಾಯ್ ದ್ವೀಪದಲ್ಲಿ ಇಳಿದಿದೆ,ಬಾಂಬ್ ಬೆದರಿಕೆ ಬಗ್ಗೆ ಮಾಹಿತಿ ಬಯಸಿ ಏರ್ ಇಂಡಿಯಾವನ್ನು ಸಂಪರ್ಕಿಸಲಾಯಿತದಾರೂ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

Recent Articles

spot_img

Related Stories

Share via
Copy link