ಬೆಂಗಳೂರು
ಕೋಲಾರದ ಮೀನಾಕ್ಷಿ ಜುವೆಲರ್ಸ್ ನರಸಾಪುರದ ಶಶಿ ಬ್ಯಾಂಕರ್, ಮಾಸ್ತಿಯ ಮಾತಾ ಜುವೆಲರ್ಸ್ ಸಗಳಿಗೆ ಬೀಗ ಮುರಿದು ಕಳವು ಮಾಡಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಗ್ರಾಮಾಂತರ ಪೊಲೀಸರು 16 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಲೂರಿನ ನಳದಿಬ್ಬನಹಳ್ಳಿಯ ಮಂಜುನಾಥ್ (21), ಕೋಲಾರ ನರಸಪುರದ ಸುರೇಶ್ ಅಲಿಯಾಸ್ ಪುರಿ (26) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 76 ಸಾವಿರ ನಗದು, 500 ಗ್ರಾಂ ಚಿನ್ನಾಭರಣಗಳು, 2 ಬೈಕ್ ಸೇರಿ 16 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಶರತ್ಚಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋಲಾರದ ಮೀನಾಕ್ಷಿ ಜುವೆಲರ್ಸ್, ನರಸಾಪುರದ ಶಶಿ ಬ್ಯಾಂಕರ್, ಮಾಸ್ತಿಯ ಮಾತಾ ಜುವೆಲರ್ಸ್ ಗಳ ಬೀಗ ಮುರಿದು ನುಗ್ಗಿದ ಆರೋಪಿಗಳು ನಗದು, ಚಿನ್ನಾಭರಣಗಳನ್ನು ಕಳವು ಮಾಡಿದ್ದರು.ಇದಲ್ಲದೆ ವೇಮಗಲ್, ಮಾಸ್ತಿ, ಅವಲಹಳ್ಳಿ, ಶ್ರೀನಿವಾಸಪುರ, ತ್ಯಾಮಗೊಂಡ್ಲು, ನಂದಗುಡಿಗಳಲ್ಲಿಯೂ ಆರೋಪಿಗಳು ಮನೆ ಕಳವು ಮಾಡಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
