ಬಾಲಿವುಡ್ ಬೆಡಗಿ, ಕೃಷ್ಣ ಸುಂದರಿ, ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲಾಗಿದ್ದಾರೆ

0
81

ಬಾಲಿವುಡ್ ಬೆಡಗಿ, ಕೃಷ್ಣ ಸುಂದರಿ, ನಟಿ ಬಿಪಾಶಾ ಬಸು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ನಟಿ ಬಿಪಾಶಾ ಬಸು ಆಸ್ಪತ್ರೆ ಸೇರಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಕಳೆದ ಕೆಲ ದಿನಗಳಿಂದ ನಟಿ ಬಿಪಾಶಾ ಬಸು ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆದ್ರೆ, ಉಸಿರಾಟದ ಸಮಸ್ಯೆ ಹೆಚ್ಚಾದ ಪರಿಣಾಮ ನಿನ್ನೆ ಮುಂಬೈನ ಹಿಂದುಜಾ ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾದರು.

ಅಷ್ಟಕ್ಕೂ, ಬಿಪಾಶಾ ಬಸು ಆರೋಗ್ಯದಲ್ಲಿ ಏರುಪೇರು ಉಂಟಾಗಲು ಕಾರಣ ಏನು ಎಂಬ ಮಾಹಿತಿಯನ್ನ ಆಕೆಯ ಕುಟುಂಬ ಬಿಟ್ಟುಕೊಡುತ್ತಿಲ್ಲ. ಮೂಲಗಳ ಪ್ರಕಾರ, ಸೀನಿಯರ್ ಪಲ್ಮೊನೊಲಾಜಿಸ್ಟ್ ಡಾ.ಕಿನ್ಜಲ್ ಮೋದಿ ನೇತೃತ್ವದ ವೈದ್ಯರ ತಂಡದ ಬಳಿ ಬಿಪಾಶಾ ಬಸು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗರ್ಭಿಣಿ ಅಂತ ಸುಮ್ ಸುಮ್ನೆ ಗಾಸಿಪ್ ಹಬ್ಬಿಸುವವರ ವಿರುದ್ಧ ಬಿಪಾಶಾ ಸಿಡಿಮಿಡಿ!

ಆದಷ್ಟು ಬೇಗ ಬಿಪಾಶಾ ಬಸು ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿ ಎಂಬುದು ಅಭಿಮಾನಿಗಳ ಆಶಯ.

2001 ರಲ್ಲಿ ಬಿಡುಗಡೆ ಆದ ‘ಅಜ್ನಬಿ’ ಚಿತ್ರದ ಮೂಲಕ ಬಾಲಿವುಡ್ ಲೋಕಕ್ಕೆ ಪದಾರ್ಪಣೆ ಮಾಡಿದ ಬಿಪಾಶಾ ಬಸು ‘ರಾಝ್’, ‘ಜಿಸ್ಮ್’, ‘ನೋ ಎಂಟ್ರಿ’, ‘ಧೂಮ್ 2’, ‘ರೇಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2016 ರಲ್ಲಿ ನಟ ಕರಣ್ ಸಿಂಗ್ ಗ್ರೋವರ್ ರನ್ನ ಬಿಪಾಶಾ ಬಸು ಮದುವೆ ಆದರು.

LEAVE A REPLY

Please enter your comment!
Please enter your name here