ಕುಣಿಗಲ್
ಇತ್ತೀಚೆಗಷ್ಟೇ ದ್ವೇಶ ಅಸೂಹೆಯಿಂದ ದುಷ್ಕರ್ಮಿಗಳು ಕಷ್ಟಪಟ್ಟು ಬೆಳೆಸಿದ್ದ ಅಡಿಕೆ, ತೆಂಗು ಬೆಳೆಗಳನ್ನು ಕತ್ತರಿಸಿ ಹಾಕಿದ್ದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಕುಣಿಗಲ್ ಪೊಲೀಸ್ ಠಾಣೆಯ ಸಬ್‍ಇನ್ಸ್‍ಸ್ಪೆಕ್ಟರ್ ವಿಕಾಸ್‍ಗೌಡ ಎಂಬುವರು ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ಕೊಡಿಸುವ ಮೂಲಕ ರೈತನ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹೇರೂರು ಗ್ರಾಮದಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಗಲಾಟೆಯು ವಿಕೋಪಕ್ಕೆ ತಿರುಗಿ ಒಂದು ಗುಂಪು ಆ.19 ಮಧ್ಯರಾತ್ರಿ ನಾಗರಾಜು ಅವರ ಜಮೀನಿಗೆ ನುಗ್ಗಿ ಹಸನಾಗಿ ಬೆಳೆದು ನಿಂತಿದ್ದ ಸುಮಾರು 800 ಅಡಿಕೆ, 100 ತೆಂಗು, 150 ಬಾಳೆಗಿಡಗಳನ್ನು ಕಡಿದು ಹಾಕಿದರು, ಇದರಿಂದ ರೈತ ನಾಗರಾಜು ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತೆ ಆಗಿತ್ತು, ಆಗ ಇವರ ನೆರವಿಗೆ ದಾವಿಸಿದ ಪಿಎಸ್‍ಐ ಎಸ್.ವಿಕಾಸ್‍ಗೌಡ ಹೆಚ್.ಡಿ.ಕೋಟೆ ತಾಲೂಕಿನ ಈಶ್ವರಹಳ್ಳಿ ಗ್ರಾಮದ ಶ್ರೀರಾಮುಲು ಅವರನ್ನು ಸಂಪರ್ಕಿಸಿ ತಮ್ಮ ಸ್ವಂತ ಖರ್ಚಿನ್ನಲೇ ರೈತ ನಾಗರಾಜು ಅವರಿಗೆ ಆರು ನೂರ ಐವತ್ತು ಅಡಿಕೆ ಸಸಿ ಹಾಗೂ ಹತ್ತು ತೆಂಗಿನ ಸಸಿಗಳನ್ನು ಕೊಡಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ,
ಶ್ಲಾಘನೆ :
ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ ರೈತನ ನೆರವಿಗೆ ದಾವಿಸಿದ ಪಿಎಸ್‍ಐ ವಿಕಾಸ್‍ಗೌಡ ಅವರ ಮಾನವೀಯ ಸೇವೆಯನ್ನು ತಾಲೂಕು ರೈತ ಸಂಘ, ಜನಪ್ರತಿನಿಧಿಗಳು ಹಾಗೂ ನಾಗರಿಕರು ಶ್ಲಾಘೀಸಿ ಪ್ರಶಂಸೆವ್ಯಕ್ತಪಡಿಸಿದ್ದಾರೆ. ರೈತ ನಾಗರಾಜು ಪಿಎಸ್‍ಐ ಅವರ ಸಹಾಯವನ್ನು ಜಿವನ ಪೂರ್ತಿ ಮರೆಯುವಂತಿಲ್ಲ ನಮ್ಮ ಕುಟುಂಬ ಚಿರಋಣಿಯಾಗಿದೆ ಎನ್ನುತ್ತಾರೆ.
ಪಿಎಸ್‍ಐ ವಿಕಾಸ್‍ಗೌಡ ಮಾತನಾಡಿ ಪೊಲೀಸ್ ವೃತ್ತಿಯು ಕಾನೂನು ಸುವ್ಯವಸ್ಥೆ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿದೆ, ರೈತ ನಾಗರಾಜು ಬೆಳೆ ಕಳೆದುಕೊಂಡು ಕಷ್ಟ ಹಾಗೂ ದುಃಖದಲ್ಲಿದ್ದಾಗ ಅವರಿಗೆ ಅಡಿಗೆ, ತೆಂಗು ಸಸಿ ಕೊಡಿಸಲಾಗಿದೆ, ಇದಕ್ಕೆ ಸಹಕಾರ ನೀಡಿದ ರೈತ ಶ್ರೀರಾಮುಲು ಅವರಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
