ದೇಶಕ್ಕಾಗಿ ನಾಮಜಪ ಉತ್ತಮ ಬೆಳವಣಿಗೆ

ಚಿತ್ರದುರ್ಗ

      ಈ ಹಿಂದೆ ಏನಾದರೂ ಕಷ್ಟ ಬಂದಾಗ ಅದನ್ನು ಪರಿಹಾರ ಮಾಡುವಂತೆ ದೇವರಲ್ಲಿ ಬೇಡುವ ಸಲುವಾಗಿ ಜಪ, ತಪ, ಯಜ್ಞ ಯಾಗಾದಿಗಳನ್ನು ಮಾಡಲಾಗುತ್ತಿತು, ಇದೇ ರೀತಿ ಈಗ ದೇಶದ ಸಲುವಾಗಿ ನಾಮ ಜಪ ಮಾಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

      ನಗರದ ಗಾಯತ್ರಿ ಕಲ್ಯಾಣ ಮಂಟದಲ್ಲಿ ಶನಿವಾರ ಚಿತ್ರದುರ್ಗ ಸಮಗ್ರ ವಿಕಾಸ ಟ್ರಸ್ಟ್ ಲಕ್ಷ್ಯಂ 2019 ಬೆಂಗಳೂರು ಇವರ ಸಹಯೋಗೊಂದಿಗೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮತ್ತು ದೇಶದ ಸಮರ್ಥ ನಾಯಕತ್ವಕ್ಕಾಗಿ ಹಮ್ಮಿಕೊಂಡಿದ್ದ ದೇಶಕ್ಕಾಗಿ ನಾಮ ಜಪ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

       ನಮಗೆ ಕಷ್ಟಗಳು ಬಂದಾಗ ದೇವರನ್ನು ಮೊರೆ ಹೋಗುವುದು ಸಾಮಾನ್ಯ ಈ ಹಿನ್ನಲೆಯಲ್ಲಿ ದೇಶವನ್ನು ಸಂಕಷ್ಠದಿಂದ ಪಾರು ಮಾಡುವಂತೆ ಹಾಗೂ ಕಾಲ ಕಾಲಕ್ಕೆ ಮಳೆ ಬಂದು ಜನತೆ ನೆಮ್ಮದಿಯ ವಾತಾವರಣವನ್ನು ನಿರ್ಮಾಣ ಮಾಡುವಂತೆ ಪ್ರಾರ್ಥನೆ ಮಾಡಲಾಗಿದೆ. ಇಲ್ಲಿ ನಡೆದ ಜಪ ಉತ್ತಮವಾದ ಕಾರ್ಯವಾಗಿದೆ, ಇದರಲ್ಲಿ ಭಾಗವಹಿಸುವುದರ ಮೂಲಕ ದೇಶದ ಸಮಗ್ರ ಬೆಳವಣಿಗೆಗೆ ಸಹಾಯವಾಗಿದೆ ಎಂದರು.

       ದೇಹ ದಣಿದಾಗ ನಿದ್ರೆ ಅಗತ್ಯವಾಗಿ ಬೇಕಾಗುತ್ತದೆ ಇದರಿಂದ ಮನಸ್ಸು ವಿಶ್ರಾಂತಿಯನ್ನು ಪಡೆಯುತ್ತದೆ ಅದೇ ರೀತಿ ಭಗವಂತನ ನಾಮ ಸ್ಮರಣೆಯನ್ನು ಮಾಡುವುದರ ಮೂಲಕ ನಾವು ಸಂಕಲ್ಪ ಮಾಡಿಕೊಂಡ ಕಾರ್ಯಗಳು ಸಿದ್ದಿಯಾಗುತ್ತದೆ ಎಂದು ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

      ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದೇಶಕ್ಕಾಗಿ ಇಷ್ಟು ಜನ ಏಕ ಕಾಲದಲ್ಲಿ ಜಪ ಮಾಡುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ, ಬರಗಾಲದ ಈ ಸಮಯದಲ್ಲಿ ದೇಶದ ಬಗ್ಗೆ ಕಾಳಜಿವಹಿಸಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ನಮ್ಮ ಪುರಾಣದ ಕಾಲದಿಂದಲೂ ಸಹಾ ಯಜ್ಞ ಯಾಗಾದಿ ಹವನ ಹೋಮಗಳನ್ನು ಮಾಡುವುದರ ಮೂಲಕ ದೇವರನ್ನು ಒಲಿಸಿಕೊಂಡು ಬಂದಂತಹ ಕಷ್ಟಗಳನ್ನು ದೂರ ಮಾಡುವಂತೆ ಪ್ರಾರ್ಥನೆ ಮಾಡುತ್ತಿದ್ದ ದೇಶ ಇದಾಗಿದೆ ಎಂದರು.

       ಮಹಿಳೆಯರು ಮನೆಯಿಂದ ಹೊರ ಬರುವುದು ಕಷ್ಟದ ಸಮಯದಲ್ಲಿ ಇಷ್ಟೊಂದು ಮಹಿಳೆಯರು ಮನೆಯಿಂದ ಹೊರಬಂದು ದೇಶಕ್ಕಾಗಿ ಪ್ರಾರ್ಥನೆ ಮಾಡುತ್ತಿರುವುದು ಬೆಳವಣಿಗೆಯ ಹಂತವಾಗಿದೆ, ಕಳೆದ 50 – 60 ವರ್ಷದಿಂದ ದೇಶವನ್ನು ಒಂದೇ ಕುಟುಂಬ ಆಳ್ವಿಕೆಯನ್ನು ನಡೆಸುತ್ತಾ ಬಂದಿದೆ ಆಗ ಆಗದೇ ಇರುವ ಬದಲಾವಣೆ ಕಳೆದ 5 ವರ್ಷಗಳಿಂದ ನರೇಂದ್ರ ಮೋದಿ ಪ್ರಧಾನಿಯಾದಾಗ ಆಗುತ್ತಿದೆ ಇವರೇ ಮುಂದುವರೆದರೆ ದೇಶ ಮಂದಿನ ದಿನಮಾನದಲ್ಲಿ ಮತ್ತಷ್ಟು ಬೆಳವಣಿಗೆಯನ್ನು ಕಾಣುತ್ತದೆ ಎಂದು ನುಡಿದರು.

        ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ಮಾತನಾಡಿ, ಈ ಹಿಂದೆ ಕುಟುಂಬ, ಪರಿವಾರ ಬಗ್ಗೆ ಜಪ ಮಾಡುತಿದ್ದ ಜನತೆ ಈಗ ದೇಶದ ಬಗ್ಗೆ ಕಾಳಜಿಯನ್ನು ವಹಿಸುವುದರ ಮೂಲಕ ಜಪವನ್ನು ಮಾಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ನಮಗೆ ದೇಶ ಮುಖ್ಯ ನಂತರ ಬೇರೆಯದ್ದು ಎನ್ನುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಗ್ರ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಸುಜಯ ಪ್ರಕಾಶ್, ಬಿಬಿಎಂಪಿ ಮಾಜಿ ಸದಸ್ಯ ಲತಾ ನರಸಿಂಹಮೂರ್ತಿ ಭಾಗವಹಿಸಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link